Kannada NewsKarnataka NewsLatest

ಶಿವಾಜಿ ಸುಂಠಕರ್, ಪ್ರಕಾಶ ಶಿರೋಳ್ಕರ್ ವಿಚಾರಣೆ ಅಷ್ಟೆ, ಬಂಧಿಸಿಲ್ಲ – ಪೊಲೀಸರ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಎಂಇಎಸ್ ಮುಖಂಡ ಶುಭಂ ಶೇಳ್ಕೆ, ಶ್ರೀರಾಮ ಸೇನೆಯ ರಮಾಕಾಂತ ಕೊಂಡೂಸ್ಕರ್ ಸೇರಿ 27 ಜನರನ್ನು ಬಂಧಿಸಲಾಗಿದೆ.

ಆದರೆ ಮಾಜಿ ಮೇಯರ್ ಶಿವಾಜಿ ಸುಂಠಕರ್ ಮತ್ತು ಶಿವಸೇನೆ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳ್ಕರ್ ಅವರನ್ನು ಕೇವಲ ವಿಚಾರಣೆಗೊಳಪಡಿಸಲಾಗಿದೆ., ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಘಟನೆ ಸಂಬಂಧ ಕೆಲವರನ್ನು ವಿಚಾರಣೆಗೊಳಪಡಿಸಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಅಧಿಕೃತವಾಗಿ 27 ಜನರನ್ನು ಮಾತ್ರ ಬಂಧಿಸಲಾಗಿದೆ. ಬಂಧಿತರಲ್ಲಿ ಶಿವಾಜಿ ಸುಂಠಕರ್ ಮತ್ತು ಪ್ರಕಾಶ ಶಿರೋಳ್ಕರ್ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪ್ರಗತಿವಾಹಿನಿಗೆ ಸ್ಪಷ್ಟಪಡಿಸಿದ್ದಾರೆ.

 

Home add -Advt

ಶುಭಂ ಶೇಳ್ಕೆ, ಶ್ರೀರಾಮ ಸೇನೆಯ ರಮಾಕಾಂತ್ ಕೊಂಡುಸ್ಕರ್ ಆರೆಸ್ಟ್

Related Articles

Back to top button