ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಮಾಜದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಕೆಲಸಗಳನ್ನು ಮಾಡಬೇಕು. ಬಡವರ ಪರ ಕಾರ್ಯನಿರ್ವಹಿಸಬೇಕು ಅಂದಾಗ ಮಾತ್ರ ಸಂಘಟನೆಗೆ ಅರ್ಥ ಬರಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದ್ದಾರೆ.
ಮಜಗಾವಿಯಲ್ಲಿ ನೂತನ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟಿಸಿ ಮಾತನಾಡಿದ ಅವರು, ನೂತನ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಬೇಕು. ಪ್ರತಿ ವರ್ಷ ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕೆಲಸ ಆಗಬೇಕು ಎಂದರು.
ರಾಹುಲ್ ಅಭಿಮಾನಿಗಳ ಬಳಗಕ್ಕೆ ಸದಾ ನಮ್ಮ ಬೆಂಬಲ ಇರಲಿದೆ. ಬಡವರ ಪರ ಕೆಲಸ ಮಾಡುವುದರ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಬೇಕು. ಜನರ ಏನೇ ಸಮಸ್ಯೆಗಳಿದ್ದರೂ ಸಹ ನಮ್ಮ ಗಮನಕ್ಕೆ ತರುವಂತ ಕೆಲಸ ಮಾಡಬೇಕು. ಬಡವರ ಸೇವೆಗೆ ನಾವು ಎಂದು ಬಾವಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಮಜಗಾವಿಯಲ್ಲಿನ ರಾಹುಲ್ ಅಭಿಮಾನಿ ಬಳಗದಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ಮೆರವಣಿಗೆ , ಪುಷ್ಪ ಸುರಿಮಳೆಯನ್ನೇ ಸುರಿಸಿ ರಾಹುಲ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಅಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಪರಶುರಾಮ್ ಢಾಗೆ, ಪಾಂಡು ಗಿಡ್ಡನವರ, ಕಲ್ಲಪ್ಪ ಕಡೋಲ್ಕರ್, ಆಕಾಶ ಮೈತ್ರಿ, ಕುಶಪ್ಪ ನಾಯ್ಕ, ಬರಮಣ್ಣ ತಳವಾರ, ರಮೇಶ್ ತಳವಾರ, ವಿಜಯ ತಳವಾರ, ಮಾರುತಿ ಗುಟಗುದ್ದಿ, ರಾಹುಲ್ ಅಭಿಮಾನಿ ಬಳಗದ ಸದಸ್ಯರು, ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ತಾಲ್ಲೂಕಿನ ಮಚ್ಛೆ ಗ್ರಾಮದ ರಾಮೇಶ್ವರ ನಗರದಲ್ಲಿ ಅರ್ಪಾತ್ ಸ್ಪೋರ್ಟ್ಸ್ ವತಿಯಿಂದ ಆಯೋಜಿಸಿದ ಹಾಪ್ ಪೀಚ್ ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಕ್ರಿಕೆಟ್ ಆಟ ದೈಹಿಕ ಹಾಗೂ ಮಾನಸಿಕವಾಗಿ ಪೂರಕವಾಗಿದೆ. ಅದರ ಜೊತೆಯಲ್ಲಿ ಈ ರೀತಿಯ ಪಂದ್ಯಾವಳಿಗಳು ಸ್ನೇಹ ಬೆಳೆಯಲಿದೆ. ಇದೇ ರೀತಿ ಊರಿನ ಎಲ್ಲಾ ಅಭಿವೃದ್ದಿ ಕೆಲಸಗಳಿಗೆ ಎಲ್ಲಾ ಯುವಕರು ಕೈಜೋಡಿಸಬೇಕು. ನಾವು ಸದಾ ನಿಮ್ಮೊಂದಿಗೆ ಇರಲಿದ್ದೇನೆ ಎಂದು ತಿಳಿಸಿದರು.
ನಮ್ಮ ತಂದೆಯವರೂ ಸಹ ಕ್ರೀಡೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾನೆ ಬಂದಿದ್ದಾರೆ. ಅವರ ಹಾದಿಯಲ್ಲಿಯೇ ನಾವು ಸಹ ನಡಿಯುತ್ತಿದ್ದೇವೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಈ ರೀತಿ ಪಂದ್ಯಾವಳಿ ಆಯೋಜನೆಯಿಂದ ಸಾಧ್ಯ ಎಂದರು.
ಇದೇ ವೇಳೆ ಅರ್ಪಾತ್ ಸ್ಪೋರ್ಟ್ಸ್ ಸದಸ್ಯರು ರಾಹುಲ್ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅರವಿಂದ್ ಕಾರ್ಚಿ, ಸಮಾಜ ಸೇವಕ ಸಂತೋಷ ಕಾಂಬಳೆ, ಪರಶುರಾಮ್ ಡಿ, ವಿಠ್ಠಲ ಲೊಳಸುರೆ, ಸುಭಾಶ ಹೊಸಮನಿ, ಮಂಜುನಾಥ ಪತ್ತಾರ, ಯುವರಾಜ ತಳವಾರ ಸೇರಿದಂತೆ ಇತರರು ಇದ್ದರು.
ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿ
ಹೊನ್ನಿದಿಬ್ಬ ದೇವಸ್ಥಾನದಲ್ಲಿ ವಾಮಾಚಾರ ಮಾಡಿ ನಿಧಿಗಾಗಿ ಲಿಂಗ ಕಿತ್ತ ದುಷ್ಕರ್ಮಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ