ಘಟಪ್ರಭಾದಲ್ಲಿ 20%ರಷ್ಟು ಯುವಕರು ಡ್ರಗ್ಸ್ ಮತ್ತು ಗಾಂಜಾ ಚಟಕ್ಕೆ ದಾಸರಾಗಿದ್ದರೆ ಎನ್ನುವ ಮಾಹಿತಿ ಇದೆ
ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:– ಕಳೆದ ಕೆಲವು ತಿಂಗಳುಗಳಿಂದ ಘಟಪ್ರಭಾ ನಗರದಲ್ಲಿ ವಿದ್ಯಾರ್ಥಿಗಳು ಅಪ್ರಾಪ್ತರು, ಯುವಕರು ಹಾಗೂ ಅಮಾಯಕರು ಗಾಂಜಾ ಹಾಗೂ ಡ್ರಗ್ಸ್ ಚಟಕ್ಕೆ ತುತ್ತಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವುದರಿಂದ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಡ್ರಗ್ಸ್ ಮತ್ತು ಗಾಂಜಾ ಮುಕ್ತ ನಗರಕ್ಕಾಗಿ ಬೃಹತ್ ಅಭಿಯಾನ ನಡೆಯಲಿದೆ.
ಘಟಪ್ರಭಾ ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿರುವುದರಿಂದ ಆತಂಕಗೊಂಡ ಊರಿನ ಹಿರಿಯರು ಮತ್ತು ಎಲ್ಲಾ ಸ್ಥಳೀಯ ಸಂಘ-ಸಂಸ್ಥೆಗಳು ಎರಡು ದಿನದ ಹಿಂದೆ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಮ್ಮುಖದಲ್ಲಿ ಸಭೆ ಸೇರಿ ಈ ಜಾಗ್ರತಿ ಅಂದೋಲನಕ್ಕೆ ನಿರ್ಧಾರಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶ್ರೀಗಳು ಗಾಂಜಾ ಮತ್ತು ಡ್ರಗ್ಸ್ ಸೇವನೆ ಅತ್ಯಂತ ಅಪಾಯಕಾರಿ ಒಮ್ಮೆ ಚಟಕ್ಕೆ ಬಿದ್ದರೆ ಮತ್ತೆ ಅದರಿಂದ ಹೊರಬರಲು ಸಾಧ್ಯವಿಲ್ಲ. ಈಗಾಗಲೆ ಘಟಪ್ರಭಾದಲ್ಲಿ ೨೦%ರಷ್ಟು ಯುವಕರು ಡ್ರಗ್ಸ್ ಮತ್ತು ಗಾಂಜಾ ಚಟಕ್ಕೆ ದಾಸರಾಗಿದ್ದರೆ ಎನ್ನುವ ಮಾಹಿತಿ ಇದೆ. ಇದರ ಬಗ್ಗೆ ನಾವು ಪೊಲೀಸ್ ಇಲಾಖೆಯನ್ನು ಹೊಣೆಗಾರರನ್ನಾಗಿ ದೂಷಿಸುವುದಕ್ಕಿಂತ ನಮ್ಮ ಮಕ್ಕಳನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅವರಲ್ಲಿ ಜಾಗೃತೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಜಾಗೃತಿ ಜಾಥಾ ಮಲ್ಲಾಪೂರ ಲಕ್ಷ್ಮೀ ಗುಡಿಯಿಂದ ಹೊರಟು ಮೃತ್ಯುಂಜಯ ಸರ್ಕಲ್ ತನಕ ನಡೆಯಲಿದ್ದು. ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ, ಸಾಧಕ ದೇವರುಗಳ ಸಮ್ಮುಖದಲ್ಲಿ ಈ ಜಾಥಾ ನಡೆಯುತ್ತಿದ್ದು ಇದರಲ್ಲಿ ಘಟಪ್ರಭಾ ನಗರದ ಎಲ್ಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು, ರೈತ ಮುಖಂಡರು, ಯುವ ಬಿಗ್ರೇಡ್, ಭಜರಂಗದಳ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಸೇರಿ ಭಾಗವಹಿಸಲಿದ್ದಾರೆ.
ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ ನನ್ನಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ