ಪ್ರಗತಿವಾಹಿನಿ ಸುದ್ದಿ; ಗೋಕಾಕ : ಮಕ್ಕಳು ತಮ್ಮ ಆಧಾರ ನೋಂದಣಿ ಮಾಡಿ ಲಸಿಕೆ ಲಾಭ ಪಡೆದು ಸುರಕ್ಷಿತರಾಗಿರಬೇಕು. ಕೋವಿಡ್ ನಿಯಂತ್ರಣ ಮಾಡಬೇಕಾದ್ರೆ ಸರ್ಕಾರದೊಂದಿಗೆ ನಾವು ಸಹ ಸಹಕರಿಸಿದಾಗ ಮಾತ್ರ ಕೊರೊನಾ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಸತೀಶ್ ಶುಗರ್ಸ್ ಅಕ್ಯಾಡೆಮಿ ಕಾಲೇಜು ಸಭಾಭವನದಲ್ಲಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಕೊವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆ ಸರ್ಕಾರ ಹಮ್ಮಿಕೊಂಡಿದೆ. ಕೋವಿಡ್-19 ರಿಂದ ಮಕ್ಕಳನ್ನು ರಕ್ಷಿಸಲು ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪಾಲಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.
ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್, ರೂಪಾಂತರಿ ವೈರಸ್ ಜನರನ್ನು ಕಾಡುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಮಕ್ಕಳು ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಬಳಿಕವೂ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ , ದೈಹಿಕ ಅಂತರ, ಆಗಾಗ ಕೈ ತೊಳೆದುಕೊಳ್ಳುವುದನ್ನು ಮಾಡಬೇಕು ಎಂದು ತಿಳಿಸಿದರು. ಇದೇ ವೇಳೆ ಕಾಲೇಜು ಸಿಬ್ಬಂದಿ ರಾಹುಲ್ ಜಾರಕಿಹೊಳಿ ಅವರನ್ನು ಸತ್ಕರಿಸಿ, ಗೌರವಿಸಿದರು.
ಕೊರೊನಾ ಸೋಂಕಿನಿಂದ ಅನೇಕ ಸಾವು ನೋವುಗಳನ್ನು ಕಣ್ಣಾರೆ ಕಂಡಿದ್ದೇವೆ. ಅದನ್ನು ಒಗ್ಗಟ್ಟಿನಿಂದ ಹೊಡೆದೋಡಿಸಬೇಕಿದೆ. ಪ್ರತಿಯೊಂದು ಶಾಲೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಲಸಿಕೆ ಪಡೆಯಬೇಕು ಎಂದು ಹೇಳಿದರು.
ಡಾ. ರವೀಂದ್ರ ಅಂಟಿನ, ಆರ್.ಎಸ್.ಡುಮ್ಮಗೋಳ, ಎಸ್.ಎಸ್.ಮೆಣಸಗಿ, ಟಿ.ಬಿ.ತಳವಾರ, ಆರ್.ಜಿ.ಬಸ್ಸಾಪುರ, ಮಾರುತಿ ಗುಟಗುದ್ದಿ, ವಿವೇಕ ಜತ್ತಿ, ಆರೋಗ್ಯ ಇಲಾಖೆ ವೈದ್ಯರು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳ, ಪೋಷಕರು ಈ ಸಂದರ್ಭದಲ್ಲಿ ಇದ್ದರು.
ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯಗೆ ಬ್ಲ್ಯಾಕ್ ಮೇಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ