Latest

Shocking News: ಫೆಬ್ರವರಿಯಲ್ಲಿ ಪ್ರತಿದಿನ 10 ಲಕ್ಷ ಜನರಿಗೆ ಸೋಂಕು!

ಕೋವಿಡ್ ಪ್ರಕರಣದ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ಐಐಎಸ್ ಸಿ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೂಪಾಂತರಿ ವೈರಸ್ ಒಮಿಕ್ರಾನ್ ಸೋಂಕಿಗೆ ಕಾರಣವಾಗಿರುವ ಕೊರೊನಾ ಮೂರನೇ ಅಲೆ ಫೆಬ್ರವರಿಯಲ್ಲಿ ಇನ್ನಷ್ಟು ಹೆಚ್ಚಲಿದೆ. ಪ್ರತಿದಿನ 10 ಲಕ್ಷ ಜನ ಸೋಂಕಿಗೆ ಒಳಗಾಗಲಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ ಸಿ) ಬಹಿರಂಗಪಡಿಸಿದೆ.

ಕೊರೊನಾ ಮೂರನೇ ಅಲೆ ಉತ್ತುಂಗಕ್ಕೇರಲಿದ್ದು, ಜನವರಿ ಕೊನೇ ವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಳವಾಗಲಿದೆ. ರಾಜ್ಯದಿಂದ ರಾಜ್ಯಕ್ಕೆ ಹಾಗೂ ನಗರ ಪ್ರದೇಶಗಳಲ್ಲಿ ಮೂರನೇ ಅಲೆ ಪ್ರಭಾವ ಭಿನ್ನವಾಗಿರಲಿದೆ ಎಂದು ಐಐಎಸ್ ಸಿ ವಿಜ್ಞಾನಿಗಳು ತಿಳಿಸಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದ್ದು, ಜನವರಿ ಅಂತ್ಯ ಹಾಗೂ ಫೆಬ್ರವರಿಯಲ್ಲಿ ಪ್ರತಿದಿನ 1 ಲಕ್ಷದ 75 ಸಾವಿರ ಪ್ರಕರಣ ಪತ್ತೆಯಾಗಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಕೇರಳದಲ್ಲಿ ಪ್ರತಿದಿನ ಬರೋಬ್ಬರಿ 1 ಲಕ್ಷ ಪ್ರಕರಣ ಹಾಗೂ ತಮಿಳುನಾಡಿನಲ್ಲಿ 80 ಸಾವಿರ ಪ್ರಕರಣ ದಾಖಲಾಗಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 70 ಸಾವಿರ ಸೋಂಕಿತರು ಪತ್ತೆಯಾಗಲಿದ್ದಾರೆ ಎಂದು ಹೇಳಿದೆ.

ಒಟ್ಟಾರೆ ದೇಶಾದ್ಯಂತ ಫೆಬ್ರವರಿಯಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಲಿದ್ದು, ಮಾರ್ಚ್ ವೇಳೆಗೆ ಸೋಮ್ಕಿತರ ಸಂಖ್ಯೆ ಇಳಿಕೆಯಾಗಲಿದೆ ಎಂದು ಐಐಎಸ್ಸಿ ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಎಚ್ಚರ: ಬೆಳಗಾವಿಯಲ್ಲಿ 258 ಜನರ ಮೇಲೆ ಕೇಸ್, 39 ವಾಹನ ಸೀಜ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button