Latest

ಗಂಗಾ ಪೂಜೆ ನೆರವೇರಿಸಿದ ಡಿ.ಕೆ.ಶಿವಕುಮಾರ್; ಮೇಕೆದಾಟು ಪಾದಯಾತ್ರೆ ಆರಂಭ; ಚಿತ್ರರಂಗದ ಗಣ್ಯರೂ ಭಾಗಿ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಕರೆ ನೀಡಿರುವ ಪಾದಯಾತ್ರೆ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದ್ದಾರೆ.

ನಂತರ ನಾಡಗೀತೆ, ರೈತಗೀತೆ ಮೂಲಕ ವೇದಿಕೆ ಕಾರ್ಯಕ್ರಮ ಆರಂಭಗೊಂಡಿದ್ದು, ಕಾವೇರಿ ಹಾಗೂ ಅರ್ಕಾವತಿ ನದಿ ಸಂಗಮದಿಂದ ಪಾದಯಾತ್ರೆಗೆ ಚಾಲನೆ ದೊರೆತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ದುನಿಯಾ ವಿಜಯ್, ಸೇರಿದಂತೆ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಆರ್.ವಿ.ದೇಶಪಾಂಡ್, ಎಚ್,ಕೆ,ಪಾಟೀಲ, ಮಾಜಿ ಸಚಿವರು, ಕೆಪಿಸಿಸಿ ಮುಖಂಡರು, ಬೆಳಗಾವಿಯ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪಾದಯಾತ್ರೆ ಮಾರ್ಗ

1ನೇ ದಿನ: ಸಂಗಮದಲ್ಲಿ ಪಾದಯಾತ್ರೆ ಆರಂಭ, ಎಗ್ಗನೂರಿನಲ್ಲಿ ಊಟ, ದೊಡ್ಡಾಲಹಳ್ಳಿಯಲ್ಲಿ ವಾಸ್ತವ್ಯ

2ನೇ ದಿನ: ದೊಡ್ಡಾಲಹಳ್ಳಿಯಿಂದ ಆರಂಭ. ಕನಕಪುರದಲ್ಲಿ ವಾಸ್ತವ್ಯ

3ನೇ ದಿನ: ಕನಕಪುರದಿಂದ ಆರಂಭ. ಚಿಕ್ಕೇನಹಳ್ಳಿಯಲ್ಲಿ ವಾಸ್ತವ್ಯ

4ನೇ ದಿನ: ಚಿಕ್ಕೇನಹಳ್ಳಿಯಿಂದ ಆರಂಭ, ರಾಮನಗರದಲ್ಲಿ ವಾಸ್ತವ್ಯ

5ನೇ ದಿನ: ರಾಮನಗರದಿಂದ ಆರಂಭ. ಬಿಡದಿಯಲ್ಲಿ ವಾಸ್ತವ್ಯ 6ನೇ ದಿನ: ಬಿಡದಿಯಿಂದ ಆರಂಭ. ಕೆಂಗೇರಿ ಪೊಲೀಸ್ ಠಾಣೆ ಬಳಿ ವಾಸ್ತವ್ಯ

7ನೇ ದಿನ: ಕೆಂಗೇರಿಯಿಂದ ಆರಂಭ. ಸಾರಕ್ಕಿ ಬಳಿ ವಾಸ್ತವ್ಯ

8ನೇ ದಿನ: ಸಾರಕ್ಕಿಯಿಂದ ಮಾರತ್‌ಹಳ್ಳಿ ಜಂಕ್ಷನ್ ಬಳಿ ವಾಸ್ತವ್ಯ

9ನೇ ದಿನ: ಮಾರತ್‌ಹಳ್ಳಿಯಿಂದ ಹೊರಟು ಲಿಂಗರಾಜಪುರ ಜಂಕ್ಷನ್‌ನಲ್ಲಿ ವಾಸ್ತ ಹೆಣ್ಣೂರು ಕ್ರಾಸ್‌ನಿಂದ ಪಯಣ, ಕಾಂಗ್ರೆಸ್ ಭವನದಲ್ಲಿ ವಾಸ್ತವ್ಯ

10ನೇ ದಿನ: 11ನೇ ದಿನ: ಕಾಂಗ್ರೆಸ್ ಭವನದಿಂದ ನಡಿಗೆ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ

ಮೇಕೆದಾಟು ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್; ಪಾದಯಾತ್ರೆಗೆ ನಾಳೆ ಬೆಳಿಗ್ಗೆ 8.50ರ ಶುಭ ಮುಹೂರ್ತ ಏಕೆ ಗೊತ್ತೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button