ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಿಕ್ಕರ್ ಉದ್ಯಮಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ನೀರಿನ ಟ್ಯಾಂಕ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಕಂಡು ಅಧಿಕಾರಿಗಳೇ ಶಾಕ್ ಆದ ಘಟನೆ ನಡೆದಿದೆ.
ಭೋಪಾಲ್ ನ ಲಿಕ್ಕರ್ ಉದ್ಯಮಿ ಶಂಕರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಂತೆ ಉದ್ಯಮಿ ಮನೆಯಲ್ಲಿದ್ದ ಕಂತೆ ಕಂತೆ ಹಣವನ್ನು ನೀರಿನ ಟ್ಯಾಂಕ್ ಗೆ ಬಿಸಾಕಿದ್ದಾರೆ. ನೀರಿನ ಟ್ಯಾಂಕ್ ನಲ್ಲಿದ್ದ ಹಣವನ್ನು ಮೇಲೆತ್ತಿದ ಅಧಿಕಾರಿಗಳು ಅದನ್ನು ಹೇರ್ ಡ್ರೈಯರ್ ಹಾಗೂ ಇಸ್ತ್ರಿ ಮಾಡಿ ಒಣಗಿಸಿ ಹೊತ್ತೊಯ್ದಿದ್ದಾರೆ.
ಉದ್ಯಮಿ ಮನೆಯಿಂದ ಬರೋಬ್ಬರಿ 8 ಕೋಟಿ ರೂಪಾಯಿ ಹಣ ಹಾಗೂ 3 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪತ್ನಿ ವಿನಿಮಯ ದಂಧೆ; ಪತಿ ಸೇರಿ 6 ಜನರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ