Kannada NewsKarnataka News

ಶಾಸಕ ಅನಿಲ ಬೆನಕೆ ಮಹಿಳೆಗೆ ಆವಾಜ್ ಹಾಕಿರುವ ಆಡಿಯೋ ಬಹಿರಂಗ ; ಹೀಗಾ ಮಾತಾಡೋದು ಶಾಸಕರು?

 

ಶಾಸಕ ಅನಿಲ ಬೆನಕೆ ಮಹಿಳೆಯ ಜೊತೆ ಮಾತನಾಡಿರುವ ಆಡಿಯೋ –

https://mail.google.com/mail/u/0?ui=2&ik=8ea932610f&attid=0.1&permmsgid=msg-a:r3069405001117789428&th=17e76e743a1b62f0&view=att&disp=safe&realattid=17e76e6f9cc158465051

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಶಾಸಕ ಅನಿಲ ಬೆನಕೆಗೆ ಗೋವಾ ಚುನಾವಣೆ ಮುಖ್ಯವೇ, ತಮ್ಮ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸುವುದು ಮುಖ್ಯವೇ?

ಅವರು ಮಾತನಾಡಿರುವ ಆಡಿಯೋ ಕೇಳಿದರೆ ನೀವೇ ಶಾಕ್ ಆಗ್ತೀರಿ. ಬೆಳಗಾವಿಯ ಬಾಂಧೂರ್ ಗಲ್ಲಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಲು ಫೋನ್ ಮಾಡಿದರೆ ನೀವ್ಯಾರ್ರೀ ಹೇಳೋಕೆ, ಹೇಗೆ ಮಾಡಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ಉಡಾಫೆಯ ಉತ್ತರ ನೀಡಿ, ಗದರಿಸಿದ ಶಾಸಕರು, ನಾನು ಗೋವಾ ಚುನಾವಣೆಯಲ್ಲಿದ್ದೀನಿ ಎಂದು ಮಾರುತ್ತರ ನೀಡಿದರು.

ಬಾಂಧೂರ ಗಲ್ಲಿಯಲ್ಲಿ ಗಟಾರಗಳು ತುಂಬಿ ತುಳುಕುತ್ತಿದ್ದು, ರಸ್ತೆ, ಬಾವಿಗಳೆಲ್ಲ ಗಟಾರದ ನೀರಿನಿಂದ ತುಂಬಿ ಹೋಗಿದೆ. ಅಲ್ಲಿನ ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದರೆ, ಮಹಿಳೆಯರಿಗೆ ಮನೆಯೊಳಗೆ ಸ್ವಚ್ಛ ಮಾಡುವ ಬದಲು ಗಟಾರ ಸ್ವಚ್ಛ ಮಾಡುವ ಕೆಲಸವೇ ಆಗಿದೆ. ಅಲ್ಲಿನ ಪರಿಸ್ಥಿತಿ ನೋಡಿದರೆ ಮೂಗು ತೆರೆಯುವುದೇ ಸಾಧ್ಯವಿಲ್ಲ.

ಇಂತಹ ಸಮಸ್ಯೆಗಳ ಕುರಿತು ಕಳೆದ ಹಲವಾರು ದಿನಗಳಿಂದ ಮಹಿಳೆಯರು ಪಾಲಿಕೆ ಆಯುಕ್ತರನ್ನು ಭೇಟಿಯಾಗಿದ್ದಾರೆ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ, ಅಷ್ಟೇ ಏಕೆ, ಶಾಸಕ ಅನಿಲ ಬೆನಕೆಯವರನ್ನೂ ಭೇಟಿಯಾಗಿದ್ದಾರೆ. ಎಲ್ಲರೂ ಆಶ್ವಾಸನೆ ನೀಡಿದ್ದಾರೆ. ಆದರೆ ಕೆಲಸ ಮಾತ್ತ ಆಗಲೇ ಇಲ್ಲ.

ಚೆನ್ನಾಗಿರುವ ಗಟಾರ ಒಡೆದು, ಹಾಳಾಗಿರುವ ಗಟಾರವನ್ನು ಹಾಗೆಯೇ ಬಿಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಜೂರಾಗಿರುವ ಕೆಲಸ ಮಾಡುತ್ತ, ಹಳೆಯ ಸಮಸ್ಯೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಎಷ್ಟೇ ಹೇಳಿದರೂ ಅವರ ಸಮಸ್ಯೆ ಕೇಳುವವರೇ ಗತಿ ಇಲ್ಲದಾಗಿದೆ.

ಡ್ರೈನೇಜ್ ಸಮಸ್ಯೆಯಿಂದಾಗಿ ನೀರಿನಲ್ಲಿ ಹುಳುಗಳಾಗಿವೆ. ಬಾವಿ ನೀರು ವಾಸನೆಯಾಗಿದೆ. ನೀರು ಕುಡಿಯಲು ಆಗುತ್ತಿಲ್ಲ. ಮನೆಯ ಹಿರಿಯರು, ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದಾರೆ.

ಇಂದು ಬೆಳಗ್ಗೆಯಿಂದ ಮಹಿಳೆಯರು ರಸ್ತೆಯ ಮೇಲೆಯೇ ಇದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಜ್ಯೋತಿ ಶೆಟ್ಟಿ, ಶಾಲನ್ ಚೌಗಲೆ, ಸವಿತಾ ಪೂಜೇರಿ,  ಪದ್ಮಾ ಪಾಟೀಲ, ಸವಿತಾ ಪಾಟೀಲ, ಉಜ್ವಲಾ ಕಳ್ಳಿಮನಿ, ಮಂಜುಳಾ ರಾಜಮಾನೆ ಮೊದಲಾದವರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಶಾಸಕರಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಳ್ಳಲು ಮುಂದಾಗಿದ್ದಾರೆ. ನಮಗೆ ಮೊದಲು ಡ್ರೈನೇಜ್ ಸಮಸ್ಯೆ ನಿವಾರಿಸಿಕೊಡಿ. ನಂತರ ರಸ್ತೆ ದುರಸ್ತಿಯಾಗಲಿ ಎಂದು ಹೇಳುತ್ತಿದ್ದಂತೆ ಬೆನಕೆ ರೇಗಾಡಿದರು.

ನೀವ್ಯಾರ್ರೀ ಹೇಳೋಕೆ. ನಮಗೆ ಗೊತ್ತಿದೆ ಯಾವುದನ್ನು ಮಾಡಬೇಕು ಎಂದು  ದಬಾಯಿಸಿದರು. ನಾನು ಗೋವಾ ಚುನಾವಣೆಯಲ್ಲಿದ್ದೇನೆ ಎನ್ನುತ್ತ, ಮಹಿಳೆಯರ ಮಾತನ್ನು ಕೇಳದೆ ಆವಾಜ್ ಹಾಕುತ್ತಲೇ ಇದ್ದರು.

https://mail.google.com/mail/u/0?ui=2&ik=8ea932610f&attid=0.1&permmsgid=msg-a:r3069405001117789428&th=17e76e743a1b62f0&view=att&disp=safe&realattid=17e76e6f9cc158465051

ಶಾಸಕ ಬೆನಕೆ ಸೇರಿದಂತೆ 27 ಜನರ ವಿರುದ್ಧ FIR ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button