ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅನುದಾನ ಬಿಡುಗಡೆಗೆ ಲಂಚ ಕೇಳಿದ್ದ ಬೆಳಗಾವಿ ಮುಜರಾಯಿ ಇಲಾಖೆ ತಹಶೀಲ್ದಾರ್ ಹಾಗೂ ಆತನ ಸಂಬಂಧಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮುಜರಾಯಿ ತಹಶೀಲ್ದಾರ್ ದಶರಥ ನಕುಲ ಜಾದವ ಹಾಗೂ ಆತನ ಸಂಬಂಧಿ ಸಂತೋಷ ಕಡೋಲಕರ ಬಂಧಿತ ಆರೋಪಿಗಳು.
ರಾಮದುರ್ಗದಲ್ಲಿನ ಯಕಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ ತಹಶೀಲ್ದಾರ್ ದಶರಥ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಚಾರವಾಗಿ ದೇವಸ್ಥಾನದ ಸುಭಾಷ ಗೋಡಕೆ ಎಸಿಬಿಗೆ ದೂರು ನೀಡಿದ್ದರು.
ಮಿಂಚಿನ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಇದೀಗ ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ.
ಗ್ರಾಹಕರಿಗೆ ಡಬಲ್ ಬೆಲೆ ಏರಿಕೆ ಹೊರೆ; ಕೊರೋನಾ ಸಂಕಷ್ಟದ ಮಧ್ಯೆಯೇ ಕಿಸೆಗೆ ಕತ್ತರಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ