Latest

ಕೋವಿಡ್ ಸೋಂಕು ಕಾಲಿಡದ ಏಕೈಕ ದೇಶದ ಜನ ಈಗ ಬೆಚ್ಚಿಬಿದ್ದಿದ್ದೇಕೆ ?

ಪ್ರಗತಿವಾಹಿನಿ ಸುದ್ದಿ; ಕಿರಿಬಾತಿ: 2019 ರ ಕೊನೇಯಲ್ಲಿ ಚೀನಾದಲ್ಲಿ ಶುರುವಾರ ಕೋವಿಡ್ ಸೋಂಕು 2020ರ ಆರಂಭದಿಂದ ಪ್ರಪಂಚದಾದ್ಯಂತ ವ್ಯಾಪಿಸತೊಡಗಿತು. ಪ್ರಸ್ತುತ ಇಡೀ ವಿಶ್ವವೇ ಕೋವಿಡ್‌ನಿಂದ ನರಳುತ್ತಿದೆ. ಆದರೆ ಫೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ಕಿರಿಬಾತಿ ಈವರೆಗೂ ಕೋವಿಡ್ ಸೋಂಕು ತಗುಲುದ ವಿಶ್ವದ ಏಕೈಕ ರಾಷ್ಟ್ರವಾಗಿತ್ತು. ಪ್ರಸ್ತುತ ಕೋವಿಡ್ ಈ ಪುಟ್ಟ ರಾಷ್ಟçಕ್ಕೂ ಕಾಲಿಟ್ಟಿದ್ದು ಕಿರಿಬಾತಿಯ ಜನ ಬೆಚ್ಚಿಬಿದ್ದಿದ್ದಾರೆ.

ಹೌದು, ಇಡೀ ವಿಶ್ವವನ್ನೇ ಕೋವಿಡ್ ಸೋಂಕು ವ್ಯಾಪಿಸಿದೆ ಎಂದು ಜನ ಅಂದುಕೊಂಡಿದ್ದರೂ ಕಿರಿಬಾತಿ ಮಾತ್ರ ಈವರೆಗೂ ಸೋಂಕು ತಗುಲಿಸಿಕೊಳ್ಳದೆ ಆರೋಗ್ಯ ಸುರಕ್ಷತೆ ಕಾಪಾಡಿಕೊಂಡಿತ್ತು. 1.19000 ಜನ ಸಂಖ್ಯೆ ಇರುವ ಈ ಪುಟ್ಟ ರಾಷ್ಟçದಲ್ಲಿ ಮಾತ್ರ ಈವರೆಗೂ ಯಾವುದೇ ಲಾಕ್ ಡೌನ್ ಕರ್ಫ್ಯೂ ಆರೋಗ್ಯ ತುರ್ತು ಪರಿಸ್ಥಿತಿಗಳು ಇರಲಿಲ್ಲ. ಕಿರಿಬಾತಿಯ ಜನ ಜಗತ್ತಿನ ಬೇರೆ ಬೇರೆ ರಾಷ್ಟçಗಳಲ್ಲಿ ಕೋವಿಡ್ ಸೋಂಕು ಹರಡುತ್ತಿದೆ ಎಂಬ ಸುದ್ದಿ ಮಾತ್ರ ಕೇಳಿದ್ದರೇ ವಿನಃ ಸ್ವತಃ ತಮ್ಮ ರಾಷ್ಟçದಲ್ಲಿ ಸೋಂಕು ಹರಡಬಬಹುದು ಎಂಬ ಕಲ್ಪನೆಯೂ ಇಲ್ಲದೆ ನಿರಾಳವಾಗಿ ಬದುಕುತ್ತಿದ್ದರು.

ಆದರೆ ಜ.14ರಂದು ಫಿಜಿಯಿಂದ ಬಂದ ವಿಮಾನ ಈ ದೇಶದ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ವಿಮಾನದಲ್ಲಿದ್ದ ಒಟ್ಟು56 ಪ್ರಯಾಣಿಕರ ಪೈಕಿ 44 ಜನರಲ್ಲಿ ಕೋವಿಡ್ ಸೋಂಕು ಖಚಿತಪಟ್ಟಿದೆ. ಆಮೂಲಕ ಕೋವಿಡ್ ಸೋಂಕು ಪ್ರಪಂಚದಾದ್ಯಂತ ಹರಡಿದ ಎರಡು ವರ್ಷಗಳ ಬಳಿಕ ಕಿರಿಬಾತಿಗೂ ಕಾಲಿಟ್ಟಂತಾಗಿದೆ.

ರಾಷ್ಟ್ರವೇ ಬಂದ್

ಕೋವಿಡ್ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಎಲ್ಲ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಸುರಕ್ಷತಾ ಕ್ರಮವಾಗಿ ಇಡೀ ರಾಷ್ಟ್ರವನ್ನೇ ಬಂದ್ ಮಾಡಲಾಗಿದೆ. ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಸೋಂಕು ಪ್ರಸರಣದಿಂದ ಪಾರಾಗಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಿರಿಬಾತಿ ದ್ವೀಪರಾಷ್ಟ್ರದ ಆಡಳಿತ ತಿಳಿಸಿದೆ.
ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬಸವ ಜಯಮೃತ್ಯುಂಜಯ ಶ್ರೀ ಕೆಂಡಾಮಂಡಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button