ತನ್ನ ಧರ್ಮದ ವಿರುದ್ಧ ಮಾತಾಡಿದವನ ಮೇಲೆ ಕೇಸ್ ಜಡಿದ ಸಲ್ಲುಬಾಯ್

 

ಸಲ್ಮಾನ್ ಖಾನ್‌ಗೆ ನೆರೆ- ಹೊರೆ

 

ಪ್ರಗತಿವಾಹಿನಿ ಸುದ್ದಿ, ಮುಂಬೈ – ಸಲ್ಮಾನ್ ಖಾನ್ ಥಟ್ಟನೆ ಸಿಟ್ಟಿಗೇಳುವುದು ಹೆಚ್ಚು. ಅವರು ಸೂಕ್ಷ್ಮ ಮನೋಸ್ಥಿತಿಯುಳ್ಳವರು ಎಂಬುದು ಅನೇಕ ಬಾರಿ ಸಾರ್ವಜನಿಕವಾಗಿಯೂ ಸಾಬೀತಾಗಿದೆ. ಖ್ಯಾತ ಗಾಯಕ ಅರಿಜಿತ್ ಸಿಂಗ್ ಜೊತೆ ಸ್ಟೇಜ್ ಮೇಲೆ ಆಗಿದ್ದ ಕಿರಿಕ್‌ಅನ್ನು ಈವರೆಗೂ ಸಲ್ಲು ಸಾಧಿಸುತ್ತಿದ್ದಾರೆ ಎನ್ನಲಾಗುತ್ತದೆ.

ಅನೇಕ ಸಂದರ್ಭಗಳಲ್ಲಿ ಸಲ್ಮಾನ್ ಖಾನ್ ಅವರು ಬೇಗನೆ ಕೋಪಗೊಳ್ಳುತ್ತಾರೆ. ಬಿಗ್ ಬಾಸ್  ಕಾರ್ಯಕ್ರಮವನ್ನು ನಿರೂಪಣೆ ಮಾಡುವಾಗ ಅವರು ಸಿಟ್ಟಿಗೆದ್ದ ಅನೇಕ ಉದಾಹರಣೆಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳು ಅತಿಯಾಗಿ ವರ್ತಿಸಿದಾಗಲೂ ಅವರು ರೇಗಿದ್ದಿದೆ. ಪ್ರಸ್ತುತ ಸಲ್ಮಾನ್ ಖಾನ್ ಅವರು ಪಕ್ಕದ ಮನೆಯವರ ವಿರುದ್ಧ ಸಿಟ್ಟಿಗೆದ್ದಿರುವುದು ಸುದ್ದಿಯಾಗಿದೆ. ಅದೂ ಸಹಧರ್ಮದ ವಿಚಾರದಲ್ಲಿ ಎಂಬುದು ಮಹತ್ವದ್ದು.

ಸಲ್ಮಾನ್ ಖಾನ್ ಅವರ ತಂದೆ ಮುಸ್ಲಿಂ, ತಾಯಿ ಹಿಂದೂ. ಹಾಗಾಗಿ ಅವರ ಮನೆಯಲ್ಲಿ ಎರಡೂ ಧರ್ಮದಆಚರಣೆಯನ್ನು ಪಾಲಿಸಲಾಗುತ್ತದೆ. ಆದರೆ ಸಲ್ಮಾನ್ ಖಾನ್ ಅವರ ಧರ್ಮದ ಬಗ್ಗೆ ಅವರ ಪನ್ವೇಲ್ ಫಾರ್ಮ್ ಹೌಸ್ ನ ಪಕ್ಕದ ಮನೆಯ ವ್ಯಕ್ತಿಯೊಬ್ಬ ಅವಮಾನಿಸಿ ಮಾತನಾಡಿದ್ದು ಸಲ್ಮಾನ್ ಸಿಟ್ಟಿಗೆ ಕಾರಣ ಎನ್ನಲಾಗಿದೆ. ಈ ಜಗಳದ ಕುರಿತಂತೆ ಅವರು ನೇರವಾಗಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.

ಸಲ್ಲುಗೆ ಹೊರೆಯಾಗುತ್ತಿರುವ ನೆರೆಯಾತ

ಮುಂಬೈನ ಹೊರ ವಲಯದ ಪನ್ವೇಲ್ ನಲ್ಲಿ ಸಲ್ಮಾನ್ ಖಾನ್ ಅವರು ಫಾರ್ಮ್ ಹೌಸ್ ಹೊಂದಿದ್ದಾರೆ. ಶೂಟಿಂಗ್ ಇಲ್ಲದಿರುವಾಗ ಅವರು ಸಾಮಾನ್ಯವಾಗಿ ತಮ್ಮಈ ಫಾರ್ಮ್ ಹೌಸ್ ನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಸಲ್ಮಾನ್‌ರ ಈ ಫಾರ್ಮ್ ಹೌಸ್ ಪಕ್ಕದಲ್ಲಿ ಕೇತನ್ ಕಕ್ಕಡ್ ಎಂಬ ವ್ಯಕ್ತಿಯ ಮನೆ ಮತ್ತು ಆಸ್ತಿ ಇದೆ. ಅವರಿಗೂ ಸಲ್ಮಾನ್ ಖಾನ್ ಗೂ ಕೆಲವು ವಿಚಾರಗಳಲ್ಲಿ ವೈ ಮನಸ್ಸು ಮೂಡಿದೆ. ಈ ಜಗಳದ ನಡುವೆ ಸಲ್ಮಾನ್ ಖಾನ್ ಅವರ ಧರ್ಮದ ವಿಚಾರವನ್ನು ಕೇತನ್ಎಳೆದುತಂದಿದ್ದಾರೆ.

ಸಲ್ಮಾನ್ ಜೊತೆಗಿನ ಜಗಳದ ವಿಷಯದ ಬಗ್ಗೆ ಯೂಟ್ಯೂಬ್ ಚಾನೆಲ್ ಗಳಿಗೆ ಕೇತನ್ ಅವರು ಇತ್ತೀಚೆಗೆ ಸಂದರ್ಶನ ನೀಡಿದ್ದರು. ಅದರಲ್ಲಿ ಸಲ್ಮಾನ್?ಖಾನ್?ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಎಲ್ಲ ವಿಚಾರಗಳನ್ನು ಸಲ್ಲುತುಂಬ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗಾಗಿ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವವ ಕೇತನ್ ಕಕ್ಕಡ್ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದಾರೆ.

ಆಸ್ತಿ ಜಗಳಲ್ಲಿ ನನ್ನ ವೈಯಕ್ತಿಕ ಘನತೆಗೆ ಧಕ್ಕೆ ತರುವುದು, ನನ್ನ ಧರ್ಮವನ್ನು ಎಳೆದು ತರುವುದು ಸರಿಯಲ್ಲ. ನನ್ನ ತಂದೆ ಮುಸ್ಲಿಂ, ತಾಯಿ ಹಿಂದೂ. ನನ್ನ ಸಹೋದರರು ಹಿಂದೂಗಳನ್ನು ಮದುವೆ ಆಗಿದ್ದಾರೆ. ನಾವು ಎಲ್ಲ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದು ಸಲ್ಮಾನ್ ಖಾನ್ ಗುಡುಗಿದ್ದಾರೆ. ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್, ಗೂಗಲ್ ಮುಂತಾದ ಕಡೆಗಳಲ್ಲಿ ತಮ್ಮ ಬಗ್ಗೆ ಇರುವ ಮಾನಹಾನಿಕಾರಕ ಮಾಹಿತಿಯನ್ನು ತೆಗೆದು ಹಾಕಲು ಸೂಚನೆ ನೀಡಬೇಕು ಎಂದು ಸಲ್ಮಾನ್ ಖಾನ್ ಅವರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್ ಸೋಂಕು ಕಾಲಿಡದ ಏಕೈಕ ದೇಶದ ಜನ ಈಗ ಬೆಚ್ಚಿಬಿದ್ದಿದ್ದೇಕೆ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button