Kannada NewsLatest

ನಿಪ್ಪಾಣಿ ಮತಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ಅನುದಾನ ಮಂಜೂರು

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮತಕ್ಷೇತ್ರದ ಚಾಂದ ಶಿರದವಾಡ ಗ್ರಾಮದಲ್ಲಿ ಬೀರದೇವ ಮಂದಿರದ ಸಮುದಾಯ ಭವನಕ್ಕೆ ಮಂಜೂರಾದ 5 ಲಕ್ಷ ರೂ. ಚೇkನ್ನು ಮಂದಿರದ ಆಡಳಿತ ಮಂಡಳಿಯ ಸದಸ್ಯರಿಗೆ ಸಚಿವೆ ಶಶಿಕಲಾ ಜೊಲ್ಲೆ ವಿತರಿಸಿದರು.

ನಿಪ್ಪಾಣಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಕಾರದಗಾ, ಬೋರಗಾವ, ಶಿರದವಾಡ, ಬೋಜ, ಗಳತಗಾ ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಮಂಜೂರಾದ ಹಣದ ಚೆಕ್‌ಗಳನ್ನು ದೇವಸ್ಥಾನ ಸಮಿತಿಯವರಿಗೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ವಿತರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರದಗಾ ಬಂಗಾಲಿ ಬಾಬಾ ಪೀರ ದರ್ಗಾಕ್ಕೆ – 1 ಕೋಟಿ ರೂ ಮಂಜೂರಾಗಿದ್ದು ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಗ್ರಾಮದ ಕಾರದಗಾ ಕೇದಾರಲಿಂಗ ದೇವಸ್ಥಾನಕ್ಕೆ 10 ಲಕ್ಷ ರೂ., ದತ್ತ ಮಂದಿರಕ್ಕೆ 5 ಲಕ್ಷ ರೂ. ಬೀರದೇವ ಮಂದಿರಕ್ಕೆ 25 ಲಕ್ಷ ರೂ. ಮತ್ತು ಜಂಗಲಿ ಮಹಾರಾಜ ಮಠಕ್ಕೆ 10 ಲಕ್ಷ ರೂ. ಮಂಜೂರಾಗಿದೆ.

ಚಾಂದ ಶಿರದವಾಡದ ಶ್ರೀ ಬೀರದೇವ ಮಂದಿರಕ್ಕೆ – 10 ಲಕ್ಷ ರೂ ಮಂಜೂರಾಗಿದ್ದು ಅದರಲ್ಲಿ ಮೊದಲ ಕಂತಿನಲ್ಲಿ 5 ಲಕ್ಷ ರೂ. ಚೆಕ್ ವಿತರಿಸಿದರು. ಈ ಮೊದಲು ಶಾಸಕರ ನಿಧಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ದೇಗುಲದ ಪ್ಲೇವರ್ ಬ್ಲಾಕ್ ಅಳವಡಿಸಲಾಗಿದೆ.

ಬೊರಗಾಂವ ಪಟ್ಟಣದ ವಾಶಿಖಾನ ಬೀರದೇವ ಮಂದಿರದ ಜೀಣೋಧಾರಕ್ಕಾಗಿ 10 ಲಕ್ಷ ರೂ ಮಂಜೂರಾಗಿದ್ದು ಅದರಲ್ಲಿ ಮೊದಲ ಕಂತಿನಲ್ಲಿ 5 ಲಕ್ಷ ರೂ. ಚೆಕ್ ವಿತರಿಸಿದರು. ಈ ಹಿಂದೆ ಜೊಲ್ಲೆ ಉದ್ಯೋಗ ಸಮೂಹದ ವತಿಯಿಂದ 5 ಲಕ್ಷ ರೂ ಹಾಗೂ ಶಾಸಕರ ನಿಧಿಯಿಂದ 14 ಲಕ್ಷ ರೂ. ಅನುದಾನ ನೀಡದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜಯಕುಮಾರ ಖೋತ, ರಾಮಗೌಡಾ ಪಾಟೀಲ ಮತ್ತು ಅರವಿಂದ ಖರಾಡೆ, ಅಶೋಕ ಥೋರಬೋಲೆ, ಗ್ರಾಮಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜನಿ ಜಮದಾಡೆ, ಎಪಿಎಂಸಿ ಸದಸ್ಯ ನಿತೇಶ ಖೋತ, ಮುಜರಾಯಿ ಅಧಿಕಾರಿಗಳಾದ ಶಿತಲ್ ನರಗಟ್ಟಿ, ಎಸ್ ಕೆ ಮಾಳಿ, ಲಕ್ಷ್ಮಣ ಪಸಾರೆ, ಸೋಮಾ ಗಾವಡೆ ಬಾಭಾಸಾಹೇಬ ಖೋತ, ಮೆಹಬೂಬ ಮುಜಾವರ , ವೈಶಾಲಿ ಖರಾಡೆ ಸುಷ್ಮಾ ಗವಳಿ ಯೋಗಿನಿ ಕುಲಕರ್ಣಿ ಇದ್ದರು.
ಬೇರೆ ಜಿಲ್ಲೆಯ ಉಸ್ತುವಾರಿ ನಮ್ಮ ಪಕ್ಷದ ರಾಷ್ಟ್ರೀಯ ನೀತಿ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button