ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಕೆಲ ಸಚಿವರು ತಾವು ದೇವಲೋಕದಿಂದ ಬಂದವರಂತೆ ಆಡ್ತಾರೆ. ಆರೋಗ್ಯ ಸಚಿವ ಸುಧಾಕರ್ ಏನು ಸಿಎಂ ಗಿಂತ ದೊಡ್ಡವರಾ? ಎಂದು ಶಾಸಕ ಸೋಮಶೇಖರ್ ರೆಡ್ಡಿ, ಸಚಿವ ಡಾ.ಸುಧಾಕರ್ ವಿರುದ್ಧ ಗರಂ ಆಗಿದ್ದಾರೆ.
ಸುದ್ದಿಗರರೊಂದಿಗೆ ಮಾತನಾಡಿದ ಸೋಮಶೇಖರ ರೆಡ್ಡಿ, ಸಚಿವ ಸುಧಾಕರ್ ಏನು ಮೇಲಿಂದ ಬಂದವರಾ? ಅವರು ತಾನು ದೇವರು ಎನ್ನುವಂತೆ ವರ್ತನೆ ಮಾಡ್ತಿದ್ದಾರೆ ಎಂದು ಸ್ವಪಕ್ಷೀಯ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ನಿನ್ನೆ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಈ ಭಾಗದ ಮೀಸಲಾತಿಯಲ್ಲಿ ಎಂಬಿಬಿಎಸ್ ಸೀಟ್ ಏಕಾಏಕಿ ಕಡಿತ ಮಾಡಲಾಗಿತ್ತು. ಹೀಗಾಗಿ ಆರೋಗ್ಯ ಸಚಿವರಿಗೆ ಹಲವು ಬಾರಿ ಕರೆ ಮಾಡಿದ್ದೆ, ಅವರ ಪಿಎಗೂ ಕರೆ ಮಾಡಿದ್ದೆ. ಮೆಸೇಜ್ ಕೂಡ ಹಾಕಿದ್ದೇನೆ. ಆದರೆ ಯಾವುದಕ್ಕೂ ಪ್ರತಿಕ್ರಿಯೆಯೇ ಇಲ್ಲ. ಫೋನ್ ಮಾಡಿದರೆ ರಿಸಿವ್ ಮಾದಲ್ಲ, ಮೆಸೆಜ್ ಗೆ ಉತ್ತರವಿಲ್ಲ. ಇದೇ ಕಾರಣಕ್ಕೆ ಸಿಎಂ ಬಸವರಾಜ್ ಬೊಮಮಯಿ ಭೇಟಿಯಾಗಿದ್ದೆ. ಅವರು ಕೇವಲ 30 ಸೆಕೆಂಡ್ ಗಳಲ್ಲಿ ಕೆಲಸ ಮಾಡಿಕೊಟ್ಟರು ಎಂದು ಹೇಳಿದರು.
ಸಚಿವ ಸುಧಾಕರ್ ಅವರಿಗೆ ದುರಹಂಕಾರ ಹೆಚ್ಚಾಗಿದೆ. ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ಬೊಮ್ಮಾಯಿ 6 ತಿಂಗಳ ಸಿಎಂ; ಸತೀಶ್ ಜಾರಕಿಹೊಳಿ ಹೊಸ ಬಾಂಬ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ