Kannada NewsLatest

ಬೊಮ್ಮಾಯಿ 6 ತಿಂಗಳ ಸಿಎಂ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ 6 ತಿಂಗಳ ಅವಕಾಶ ಮಾತ್ರ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಈ ಬಾರಿಯೂ ಮೂರು ಮುಖ್ಯಮಂತ್ರಿಗಳನ್ನು ಕಾಣಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರಮಾಣವಚನಕ್ಕೆ ಷರತ್ತು ಹಾಕಿಯೇ ಬೊಮ್ಮಾಯಿ ಅವರಿಗೆ ಅವಕಾಶ ಕೊಟ್ಟಿದ್ದರು. ನಮಗಿರುವ ಮಾಹಿತಿ ಪ್ರಕಾರ ಸಿಎಂ ಬೊಮ್ಮಾಯಿ ಅವರಿಗೆ 6 ತಿಂಗಳು ಮಾತ್ರ ಅಧಿಕಾರಕ್ಕೆ ಅವಕಾಶ ಕೊಡಲಾಗಿದೆ ಎಂದರು.

Home add -Advt

ಸಂಪುಟ ಪುನಾರಚನೆ ಹಾಗೂ ಶ್ರೂರಾಮುಕುಗೆ ಡಿಸಿಎಂ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಆದ್ರೂ ಕೆಲಸ ಮಾಡಬಹುದು. ಡಿಸಿಎಂ ಇಲ್ಲಾ ಅಂದ್ರು ಕೆಲಸ ಮಾಡಬಹುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ನಮ್ಮ ಸಮುದಾಯಕ್ಕೆ 7.5ರಷ್ಟು ಮೀಸಲಾತಿ ಕೊಡ್ತೀವಿ ಎಂದು ವಾಗ್ದಾನ ಮಾಡಿದ್ರು. ಈಗ 24 ತಿಂಗಳು ಕಳೆದರೂ ಮೀಸಲಾತಿ ಮಾತಿಲ್ಲ. ಎಲ್ಲಾ ಅಧಿಕಾರಕ್ಕಾಗಿ ಗಿಮಿಕ್ ಅಷ್ಟೇ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ನನ್ನನ್ನು ಬಿಟ್ಟು ನಾಲ್ಕೈದು ಜನರಿಗೆ ಸಿಎಂ ಆಗುವ ಸಾಮರ್ಥ್ಯವಿದೆ ಎಂದು ಹೇಳಿದರು.
ಸಿಎಂ ದೆಹಲಿ ಪ್ರವಾಸ ಸೋಮವಾರಕ್ಕೆ ಮುಂದೂಡಿಕೆ: ಬಜೆಟ್ ಸರಣಿ ಸಭೆಗೆ ಅನಿಶ್ಚಿತತೆ

Related Articles

Back to top button