Latest

ಬೆಂಗಳೂರಿಗೆ ಬಂತು ದೇಶದ ಅತೀ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಪರಮ್ ಪ್ರವೇಗಾ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಈಗ ಭಾರತದಲ್ಲೇ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಅಳವಡಿಸಿಕೊಂಡ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನ್ಯಾಷನಲ್ ಸೂಪರ್ ಕಂಪ್ಯೂಟಿಂಗ್ ಮಿಷನ್ ಯೋಜನೆಯಡಿ, ಪರಮ್ ಪ್ರವೇಗಾ ಹೆಸರಿನ ಸೂಪರ್ ಕಂಪ್ಯೂಟರನ್ನು ಐಐಎಸ್ಸಿಯಲ್ಲಿ ಅಳವಡಿಸಲಾಗಿದೆ. ಇದು ದೇಶದ ಯಾವುದೇ ಸಂಸ್ಥೆಯಲ್ಲಿರುವ ಸೂಪರ್ ಕಂಪ್ಯೂಟರ್‌ಗಳ ಪೈಕಿ ಅತ್ಯಂತ ಹೆಚ್ಚು ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಎಂದು ಗುರುತಿಸಲಾಗಿದೆ. ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಬಳಸುವ ನಿಟ್ಟಿನಲ್ಲಿ ಈ ಸೂಪರ್ ಕಂಪ್ಯೂಟರ್ ಅಳವಡಿಸಲಾಗಿದ್ದು ಇದು ೩.೩ ಪೆಟಾಪ್ಲಾಪ್ (petaflops), ಪ್ರತಿ ಸೆಕೆಂಡಿಗೆ ೧೦೧೫ ಆಪರೇಶನಲ್ ಸಾಮರ್ಥ್ಯ ಹೊಂದಿದೆ.

ಸೆಂಟರ್ ಫಾರ್ ಡೆವಲಪ್ಮೆಂಟ್ ಆಪ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ ಸಂಸ್ಥೆ ಈ ಸೂಪರ್ ಕಂಪ್ಯೂಟರನ್ನು ಅಭಿವೃದ್ಧಿಪಡಿಸಿದ್ದು ಇದರ ಬಹುತೇಕ ಬಿಡಿಭಾಗಗಳು ಸ್ವದೇಶಿಯಾಗಿವೆ. ಅಲ್ಲದೇ ಸ್ವದೇಶಿ ತಂತ್ರಜ್ಞಾನದ ಸಾಪ್ಟ್‌ವೇರನ್ನು ಅಳವಡಿಸಲಾಗಿದೆ. ಈ ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚೀವಾಲಯ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚೀವಾಲಯಗಳು ಸಹಕಾರ ನೀಡಿವೆ.

ಈ ಸೂಪರ್ ಕಂಪ್ಯೂಟರ್ ವಿವಿಧ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ನೆರವಾಗಲಿದೆ ಎಂದು ಐಐಎಸ್ಸಿ ತಿಳಿಸಿದೆ.

25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ “ದೈವ ಸಂಕಲ್ಪ” ಯೋಜನೆ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button