Latest

ಯಾವುದೇ ವಿವಾದ ಸೃಷ್ಟಿಸಿದರೂ ಸರ್ಕಾರ ಸಕ್ಸಸ್ ಆಗಲ್ಲ ಎಂದ ಸಿ.ಎಂ.ಇಬ್ರಾಹಿಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿವಾದ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರ ಮುಂಚೂಣಿಯಲ್ಲಿದೆ. ಗೋ ಹತ್ಯೆ, ಧರ್ಮ ಪರಿವರ್ತನಾ ಬಿಲ್ ಆಯ್ತು ಇದೀಗ ಇದ್ದಕ್ಕಿದ್ದಂತೆ ಹಿಜಾಬ್ ವಿವಾದ ಮುನ್ನೆಲೆಗೆ ಬಂದಿದೆ ಎಂದು ಎಂಎಲ್ ಸಿ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನಾದಿಕಾಲದಿಂದಲೂ ಹಿಜಾಬ್ ನಡೆದುಕೊಂಡು ಬಮ್ದಿದೆ. ಮೈಸೂರು ಮಹಾರಾಜರ ಕಾಲದಲ್ಲಿಯೂ ಇತ್ತು. ಈಗ ಒಮ್ಮೆಲೇ ವಿವಾದ ಸೃಷ್ಟಿಸಲಾಗುತ್ತಿದೆ. ಯಾವುದೇ ವಿವಾದ ಸೃಷ್ಟಿಸಿದರೂ ಸರ್ಕಾರ ಸಕ್ಸಸ್ ಆಗಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಜೆಡಿಎಸ್ ಸೇರ್ಪಡೆ ಬಗ್ಗೆ ಮಾತನಾಡಿದ ಇಬ್ರಾಹಿಂ, ಫೆ.14ರ ಬಳಿಕ ನೋಡ್ತಾ ಇರಿ ಯಾರು ಯಾರು ಕಾಂಗ್ರೆಸ್ ನಿಂದ ಹೊರಗೆ ಬರ್ತಾರೆ ಎಂದು. ಅಂದಿನ ಸಭೆ ಬಳಿಕ ಜೆಡಿಎಸ್ ಸೇರ್ಪಡೆ ಬಗ್ಗೆ ನಿರ್ಧರಿಸುತ್ತೇನೆ ಎಂದರು.

ನನಗೆ ಜೆಡಿಎಸ್ ನಿಂದ ಗೇಟ್ ಪಾಸ್ ನೀಡಿರಲಿಲ್ಲ. ಸಿದ್ದರಾಮಯ್ಯ ಅವರಿಗಾಗಿ ಜೆಡಿಎಸ್ ಬಿಟ್ಟು ಬಂದೆ ಆದರೆ ಇಂದು ಸಿದ್ದರಾಮಯ್ಯ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ನನ್ನ ಪರ ನಿಂತಿದ್ದರೆ ಹೀರೋ ಆಗ್ತಿದ್ದರು ಎಂದು ಹೇಳಿದರು.

ಇದೇ ವೇಳೆ ಅಹಿಂದ ಹಾಗೂ ಅಲಿಂಗ ಚಳುವಳಿಗಳು ಬೇರೆ. ಅಲಿಂಗ ಒಂದು ಸಾಮಾಜಿಕ ಚಳುವಳಿ. ಅಲ್ಪಸಂಖ್ಯಾತರು, ಲಿಂಗಾಯಿತರು, ಗೌಡರು ಒಂದಾಗಬೇಕು. ಅದನ್ನೇ ಅಲಿಂಗೌ ಎನ್ನುತ್ತಾರೆ. ಬಿರುಕುಗಳು ಹೋಗಬೇಕು. ದಲಿತರಲ್ಲಿ ಒಳ್ಲೆಯ ಭಾವನೆಗಳು ಬರಬೇಕು. ಅಂದು ಬಸವಣ್ಣ ಮಾಡಿದ ಕೆಲಸವನ್ನು ಇಂದು ಕರ್ನಾಟಕದಲ್ಲಿ ಮತ್ತೆ ಮಾಡಲು ಹೊರಟಿದ್ದೇವೆ. ಎಂದು ಹೇಳುವ ಮೂಲಕ ಅಲಿಂಗ ಚಳುವಳಿಯನ್ನು ಘೋಷಿಸಿದರು.

ಚಾಮರಾಜಪೇಟೆಯಿಂದ ಸ್ಪರ್ಧೆಗಾಗಿ ಹೆಸರು ಬದಲಿಸಿಕೊಳ್ಳಲಿರುವ ಸಿದ್ದರಾಮಯ್ಯ; ಪ್ರತಾಪ್ ಸಿಂಹ ವ್ಯಂಗ್ಯ
ಪ್ರೇಮ ವಿವಾಹ; ಆತ್ಮಹತ್ಯೆ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣಗಳ್ಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ ಜೋಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button