ಬಿಸಿಸಿಐ ಹೇಳಿದ್ದೇನು ?
ಕೋಲ್ಕತ್ತಾ – ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬೌಲಿಂಗ್ ಮಾಡುತ್ತಿರುವ ಫೋಟೊ ಒಂದನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದು ಅನೀಲ್ ಕುಂಬ್ಳೆಯವರ ೧೦ ವಿಕೆಟ್ ಪಡೆದ ೨೩ನೇ ಸಂಭ್ರಮಾಚರಣೆ ಎಂದು ಕಮೆಂಟ್ ಮಾಡಲಾಗಿದೆ. ಈ ಫೋಟೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಈ ಹಿಂದೆ ಟೀಂ ಇಂಡಿಯಾದ ಬ್ಯಾಟಿಂಗ್ ಶಕ್ತಿಯಾಗಿದ್ದ ರಾಹುಲ್ ದ್ರಾವಿಡ್ ಗೋಡೆ ಎಂದೇ ಖ್ಯಾತರಾಗಿದ್ದಾರೆ. ಅವರು ಕೆಲ ಅವಧಿಗೆ ವಿಕೇಟ್ ಕೀಪರ್ ಕೂಡ ಆಗಿದ್ದರು. ಆದರೆ ದ್ರಾವಿಡ್ ಬೌಲಿಂಗ್ ಮಾಡಿದ್ದು ತೀರಾ ಅಪರೂಪ. ಹಾಗಾಗಿ ದ್ರಾವಿಡ್‌ರ ಬೌಲಿಂಗ್ ಫೋಟೊ ಬಗ್ಗೆ ಕ್ರಿಕೇಟ್ ಪ್ರಿಯರು ಅಪಾರ ಕುತೂಹಲ ಹೊಂದಿದ್ದಾರೆ.
ಟೀಂ ಇಂಡಿಯಾಗೆ ತರಬೇತಿ ನೀಡುವ ವೇಳೆ ಸೋಮವಾರ ದ್ರಾವಿಡ್ ಬೌಲಿಂಗ್ ಮಾಡಿದ್ದರ ಫೋಟೊ ಈಗ ವೈರಲ್ ಆಗುತ್ತಿದೆ.
ಕುಂಬ್ಳೆಯ ೨೩ನೇ ವಾರ್ಷಿಕೋತ್ಸವ
೧೯೯೯ರ ಫೆಬ್ರವರಿ ೭ ಅನೀಲ್ ಕುಂಬ್ಳೆ ಪಾಲಿಗೆ ಅವಿಸ್ಮರಣೀಯ ದಿನ. ಅಂದು ಅವರು ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲ ೧೦ ವಿಕೇಟ್‌ಗಳನ್ನು ಕಿತ್ತಿದ್ದರು. ಅಂದು ಕುಂಬ್ಳೆ ಒಟ್ಟು ೨೬.೩ ಓವರ್ ಎಸೆದಿದ್ದು ಅದರಲ್ಲಿ ೯ ಮೇಡನ್‌ಗಳಿದ್ದವು. ೭೪ ರನ್ ನೀಡಿ ೧೦ ವಿಕೇಟ್ ಪಡೆದಿದ್ದರು. ಆಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲ ೧೦ ವಿಕೇಟ್ ಪಡೆದ ವಿಶ್ವದ ೨ನೇ ಬೌಲರ್ ಎಂಬ ಕೀರ್ತಿಗೆ ಕುಂಬ್ಳೆ ಪಾತ್ರರಾಗಿದ್ದಾರೆ. ಎಂದೂ ಬೌಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ವಹಿಸದ ದ್ರಾವಿಡ್ ಪ್ರಸ್ತುತ ಫೆ. ೭ರಂದೇ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಕುಂಬ್ಳೆ ೧೦ ವಿಕೇಟ್ ಕಿತ್ತ ದಿನದ ೨೩ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಎಂದು ಬಿಸಿಸಿಐ ಬಣ್ಣಿಸಿದೆ.
ಕೈ ತೊಳೆಯಲು ಹೋದ ಯುವಕನನ್ನು ಎಳೆದೊಯ್ದ ಮೊಸಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ