Latest

ತನ್ನನ್ನು ಅಮ್ಮಾ ಎಂದು ಕರೆಯಲು ಹೇಳಿದ್ದರು ; ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಕಣ್ಣೀರಾದ ಪಾಕಿಸ್ತಾನಿ ಕ್ರಿಕೇಟಿಗ

ಕರಾಚಿ – ಲತಾ ಮಂಗೇಶ್ಕರ್ ನಿಧನಕ್ಕೆ ಇಡೀ ವಿಶ್ವವೇ ಕಂಬನಿ ಕಿಡಿದಿದೆ. ಜಗತ್ತಿನಾಧ್ಯಂತ ಅವರ ಸಾವಿಗೆ ಜನ ಮಮ್ಮಲ ಮರುಗಿದ್ದಾರೆ. ಅವರ ಮಧುರ ಕಂಠದ ಗಾಯನ ಇನ್ನು ನೆನಪು ಮಾತ್ರ. ಅವರು ಹಾಡಿದ ಸಾವಿರಾರು ಗೀತೆಗಳು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ.

ಅವರ ಅಭಿಮಾನಿಗಳಲ್ಲಿ ಪಾಕಿಸ್ತಾನ ಕ್ರಿಕೇಟ್ ತಂಡದ ಮಾಜಿ ವೇಗಿ ಶೋಯೆಬ್ ಅಕ್ತರ್ ಕೂಡ ಒಬ್ಬರು. ಲತಾ ಮಂಗೇಶ್ಕರ್ ಜೊತೆಗಿನ ತಮ್ಮ ಒಡನಾಟದ ಬಗ್ಗೆ ತಮ್ಮದೇ ಆದ ಯು ಟ್ಯೂಬ್ ಚ್ಯಾನಲ್‌ನಲ್ಲಿ ಶೋಯೆಬ್ ಅಕ್ತರ್ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಭಾರತ ಪ್ರವಾಸದ ವೇಳೆ ಒಮ್ಮೆ ಲತಾ ಮಂಗೇಶ್ಕರ್ ಅವರನ್ನು ಭೇಟಿ ಮಾಡಿದಾಗ ತನನ್ನು ಅಮ್ಮಾ (ಮಾ ) ಎಂದು ಕರೆಯುವಂತೆ ಹೇಳಿದ್ದರು ಎಂದು ಶೋಯೆಬ್ ಕಣ್ಣೀರಾಗಿದ್ದಾರೆ.

೨೦೧೬ರಲ್ಲಿ ಭಾರತ ಪ್ರವಾಸದ ವೇಳೆ ಲತಾ ಮಂಗೇಶ್ಕರ್ ಅವರ ಜೊತೆ ಮಾತನಾಡುವ ಅವಕಾಶ ಲಭ್ಯವಾಗಿತ್ತು. ನಾನು ಅವರನ್ನು ಲತಾಜಿ ಎಂದು ಸಂಬೋಧಿಸಿದ್ದೆ. ಆಗ ಅವರು ತನ್ನನ್ನು ಮಾ ಎಂದು ಕರೆಯುವಂತೆ ಹೇಳಿದ್ದರು. ಅಂದಿನಿಂದ ನಾನು ಲತಾ ಮಂಗೇಶ್ಕರ್ ಅವರನ್ನು ಮಾ ಎಂದೇ ಕರೆಯುತ್ತ ಬಂದಿದ್ದೇನೆ ಎಂದು ಶೋಯೆಬ್ ಹೇಳಿಕೊಂಡಿದ್ದಾರೆ.

ಕ್ರಿಕೇಟ್ ಫ್ಯಾನ್ ಆಗಿದ್ದರು.

ಗಾಯನದ ಬಗ್ಗೆ ಇದ್ದ ಆಸಕ್ತಿಯ ಜತೆಗೆ ಲತಾ ಮಂಗೇಶ್ಕರ್ ಅಪ್ಪಟ ಕ್ರಿಕೇಟ್ ಪ್ರೇಮಿಯಾಗಿದ್ದರು. ಭಾರತೀಯ ಕ್ರಿಕೇಟ್ ತಂಡದ ಬಹುತೇಕ ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ೧೯೮೩ ವಿಶ್ವಕಪ್ ಅನ್ನು ಭಾರತ ತಂಡ ಗೆದ್ದ ಬಳಿಕ ತಂಡಕ್ಕೆ ಧನ ಸಹಾಯ ಮಾಡುವ ಕಾರ್ಯವನ್ನು ಸಹ ಅವರು ಕೈಗೊಂಡಿದ್ದರು.

ಲತಾ ಮಂಗೇಶ್ಕರ್ ಅವರ ಜೊತೆಗಿನ ಸಂಭಾಷಣೆಯಲ್ಲಿ ಅವರು ಕ್ರಿಕೇಟ್ ಬಗ್ಗೆ ತೋರಿಸಿದ ಪ್ರೀತಿಯನ್ನು ಶೋಯೆಬ್ ತಮ್ಮ ಯುಟ್ಯೂಬ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಲತಾ ಮಂಗೇಶ್ಕರ್ ನನ್ನ ಬೌಲಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಹೋರಾಟವನ್ನು ಮೆಚ್ಚಿಕೊಂಡಿದ್ದರು. ನಾನು ಫೀಲ್ಡ್‌ನಲ್ಲಿ ಹೆಚ್ಚು ಎಗೆಸ್ಸಿವ್ ಆಗಿದ್ದೇನೆ ಎಂದು ಲತಾ ಮಂಗೇಶ್ಕರ್ ಹೇಳಿದ್ದರು ಎಂಬುದಾಗಿ ಶೋಯೆಬ್ ಸ್ಮರಿಸಿದ್ದಾರೆ.

ದ್ರಾವಿಡ್ ಬೌಲಿಂಗ್ ಮಾಡುತ್ತಿರುವ ಫೋಟೊ ವೈರಲ್ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button