ಪ್ರಗತಿವಾಹಿನಿ ಸುದ್ದಿ; ಮೈಸೂರು: ಹಿಜಾಬ್ ಧರಿಸಿ ವಿಧಾನಸೌಧ ಅಧಿವೇಶಕ್ಕೆ ಬರುವುದಾಗಿ ಹೇಳಿದ್ದ ಶಾಸಕಿ ಖನೀಜ್ ಫತಿಮಾ ಅವರಿಗೆ ತಿರುಗೇಟು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಧಮ್ ಇದ್ದರೆ ಮಸೀದಿಗೆ ಮಹಿಳೆಯರಿಗೆ ಪ್ರವೇಶ ಕೊಡಿಸಿ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವರು, ನೀವು ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಲ್ಲ. ಮೊದಲು ನೀವು ಮಸೀದಿಗೆ ಹೋಗಿ ಎಂದು ಸವಾಲು ಹಾಕಿದರು.
ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆಗೆ ನಿಷೇಧ ಮಾಡಿಲ್ಲ ಹಾಗಾಗಿ ನೀವು ಹೊರಗಡೆಗೆ ಹಿಜಾಬ್ ಧರಿಸಬಹುದು, ಶಾಲೆಗಳಿಗೆ ಮಾತ್ರ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಕಿಡಿಕಾರಿದ ಈಶ್ವರಪ್ಪ, ಇಬ್ರಾಹಿಂ, ಹೇಳಿಕೆ ಮುಸ್ಲೀಂ ಮಹಿಳೆಯರಿಗೆ ಮಾಡಿದ ಅಪಮಾನ. ಮುಸ್ಲಿಂ ಮಹಿಳೆಯರ ಮುಖ ನೋಡಲು ಹಿಜಾಬ್ ತೆಗೆಯಬೇಕಾ? ಇಂತಹ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ