Latest

ಚಂದನವನದ ಹೊಸ ಕೋಲ್ಮಿಂಚು ಸುಶ್ಮಿತಾ ಊರ್ವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗ ಸದಾ ನೈಜ ಪ್ರತಿಭೆಗಳನ್ನು ಕೈಬೀಸಿ ಕರೆಯುತ್ತದೆ, ಬೆಳೆಸುತ್ತದೆ. ನೈಜವಾಗೇ ಉಳಿದರೆ ಉಳಿಸುತ್ತದೆ ಕೂಡ… ತನ್ನ ಅಮೋಘ ಪ್ರತಿಭಾ ಕೌಶಲ್ಯತೆಯಿಂದ ಅನೇಕ ನಟ ನಟಿಯರು ಇಲ್ಲಿ ನೆಲೆ ಕಟ್ಟಿಕೊಂಡು ಬೆಳೆದಿದ್ದಾರೆ. ಈಗ ಈ ಸಾಲಿಗೆ ಸೇರಲು ತಯಾರಾಗಿದ್ದಾರೆ ಮಂಗಳೂರ್ ಬೆಡಗಿ ಸುಶ್ಮಿತಾ ಊರ್ವಿ.

ತನ್ನ ಸೌಂದರ್ಯ ಹಾಗೂ ನೈಜ ಅಭಿನಯದ ಮೂಲಕ ಕನ್ನಡಿಗರ ಮನಗೆಲ್ಲಲು ಹಂಬಲಿಸುತ್ತಿರುವ ಈ ಮುದ್ದು ಮುಖದ ನಟಿ ಸದ್ಯ ಆರ್ಯನ್, ಸ್ವರ್ಗಂ ಹಾಗೂ ಅರ್ಥಂ ಎಂಬ ನವ ಚಿತ್ರಗಳಲ್ಲಿ ನಟಿಸುತ್ತಿದಾರೆ ಹಾಗೂ ಇನ್ನು ಹೆಸರು ಇಡದ 7ಕ್ಕೂ ಅಧಿಕ ಚಿತ್ರಗಳಿಗೆ ಸಹಿ ಹಾಕುವ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆವೂರುವ ಖಚಿತ ಸಂದೇಶ ನೀಡಿದ್ದಾರೆ.

ನಟನಾ ಶಕ್ತಿ ಹಾಗೂ ಚಿತ್ರರಂಗದಲ್ಲಿ ಏನಾದ್ರು ಸಾದಿಸುವ ಸ್ಪಷ್ಟ ಗುರಿ ಹೊಂದಿರುವ ಈ ಬೆಡಗಿ ಹರಳು ಹುರಿದಂತೆ ಮಾತಾಡಿ ಎಲ್ಲರ ಮನಗೆಲ್ಲುದರಲ್ಲಿ ಯಶಸ್ವಿ ಆಗಿದ್ದರೆ, ಮಂಗಳೂರಿನಲ್ಲಿ ಜನಿಸಿದ ಸುಶ್ಮಿತಾ ಉರ್ವಿ ಮಂಗಳೂರಿನ ಕೆ ಪಿ ಟಿ ವಿದ್ಯಾಲಯ ದಲ್ಲಿ ರಾಸಾಯನಿಕ ಶಾಸ್ತ್ರದ್ಲಲಿ ಡಿಪ್ಲೋಮ ಮಾಡಿದ್ದು ಸದ್ಯಕ್ಕೆ ಚಿತ್ರರಂಗದಲ್ಲಿ ಬಿಡುವಿಲ್ಲದ ತಾರೆಯಾಗಿದ್ದರೆ.

ತನ್ನ ಎಲ್ಲಾ ಸಾಧನೆಗೆ ಹೆತ್ತವರ ನಿರಂತರ ಪರಿಶ್ರಮ ಸ್ಮರಿಸುವ ಈ ಬೆಡಗಿ ಸದಾ ಅವರಿಗೆ ಋಣಿಯಾಗಿದ್ದಾರೆ ಹಾಗೂ ಚಿತ್ರರಂಗದಲ್ಲಿ ಸಾದಿಸಿ ತೋರಲು ಹಂಬಲಿಸುತಿದ್ದಾರೆ.

ವಿಭಿನ್ನ ಪಾತ್ರಗಳು ಹಾಗೂ ಜನರ ಮನಸು ಮುಟ್ಟುವ ಪಾತ್ರಗಳನ್ನು ಹೆಚ್ಚಾಗಿ ಅಭಿನಹಿಸಲು ಇಷ್ಟ ಪಡುವ ಊರ್ವಿ ಕನ್ನಡಿಗರ ಮನ ಗೆಲ್ಲಲು ತಯಾರಾಗಿದ್ದಾರೆ.

ಇವರ ಎಲ್ಲ ಚಿತ್ರಗಳು ಯಶಸ್ವೀ ಆಗಲಿ ಕನ್ನಡ ಚಿತ್ರರಂಗದಲ್ಲಿ ಈ ಇನ್ನೊಂದ್ ಅಚ್ಚ ಕನ್ನಡಿಗ ಪ್ರತಿಭೆ ಬೆಳೆಯಲಿ ಹೊಳೆಯಲಿ ಎಂದು ನಮ್ಮ ಆಶಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button