Kannada NewsKarnataka News
ಗೋವಾದಲ್ಲಿ ಅಮಿತ್ ಶಾ ಸ್ವಾಗತಿಸಿದ ರಮೇಶ ಜಾರಕಿಹೊಳಿ: ಗೋಕಾಕ್ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬಿಚೋಲಿಂ – ಗೋವಾ ಚುನಾವಣೆ ಪ್ರಚಾರಕ್ಕೆಂದು ಬುಧವಾರ ಸಂಜೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಿಚೋಲಿಂ ನಲ್ಲಿ ಕರ್ನಾಟಕದ ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ವಾಗತಿಸಿದರು.
ಒಟ್ಟೂ 4 ವಿಧಾನ ಸಭೆ ಕ್ಷೇತ್ರಗಳಲ್ಲಿ ಅಮಿತ್ ಶಾ ಪಾದಯಾತ್ರೆ ನಡೆಯುತ್ತಿದೆ. ಅಮಿತ್ ಶಾ ಜೊತೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ರಮೇಶ ಜಾರಕಿಹೊಳಿ, ಮಹಾರಾಷ್ಟ್ರ ಮತ್ತು ಗೋವಾದ ಹಲವು ಮುಖಂಡರು, ಕರ್ನಾಟಕದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯದರ್ಶಿ ಕಿರಣ ಜಾಧವ ಮೊದಲಾದವರು ಭಾಗವಹಿಸಿದ್ದಾರೆ. ಬುಧವಾರ ರಾತ್ರಿ ಊಟ ಮುಗಿಸಿ ಅಮಿತ ಶಾ ಗೋವಾದಿಂದ ತೆರಳಲಿದ್ದಾರೆ.
ಗೋಕಾಕದಲ್ಲಿ ನಿರ್ಮಾಣವಾಗಲಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಆಗಮಿಸುವಂತೆ ರಮೇಶ ಜಾರಕಿಹೊಳಿ ಅಮಿತ್ ಶಾ ಅವರನ್ನು ಕೋರಿದರು. ಬರೋಣ ಬರೋಣ ಎಂದು ಅಮಿತ್ ಶಾ ನಗು ನಗುತ್ತಲೇ ಹೇಳಿದರು.
ಬಹು ನಿರೀಕ್ಷಿತ ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ