Latest

ಶಾಲೆಗಳ ಆರಂಭ: ಮುಖ್ಯಮಂತ್ರಿಗಳಿಗೆ ವರದಿ -ಸುರೇಶ ಕುಮಾರ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಸರಣಿ ಸಭೆಗಳನ್ನು ನಡೆಸುತ್ತಿದೆ. ಬುಧವಾರ ಸಭೆ ಆರಂಭವಾಗಿದ್ದು, ಇನ್ನೂ 2 -3 ದಿನ ಮುಂದುವರಿಯಲಿದೆ.

ಸ್ವತಃ ಶಿಕ್ಷಣ ಸಚಿವ ಸುರೇಶ ಕುಮಾರ ಮುಖ್ಯ ಸಭೆಯ ನೇತೃತ್ವ ವಹಿಸಿದ್ದು, ಬೇರೆ ಬೇರೆ ಹಂತಗಳಲ್ಲಿ ಕೂಡ ಸಮಾಲೋಚನೆಗಳು ನಡೆಯುತ್ತಿವೆ.

ಮುರಾರ್ಜಿ ವಸತಿ ಶಾಲೆ, ಚನ್ನಮ್ಮ ವಸತಿ ಶಾಲೆ ಸೇರಿದಂತೆ ವಸತಿ ಶಾಲೆಗಳ ಮುಖ್ಯಸ್ಥರು, ವಿವಿಧ ಜಿಲ್ಲೆಗಳ ಡಿಡಿಪಿಐಗಳ ಜೊತೆಗೆ ಕೂಡ ಮೊದಲ ಹಂತದಲ್ಲಿ ಚರ್ಚೆ ನಡೆದಿದೆ.

ಜೊತೆಗೆ, ಕೆಲವು ಜಿಲ್ಲೆಗಳ ಜನಪ್ರತಿನಿಧಿಗಳು ಅಲ್ಲಿಲ್ಲಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಿದ್ದಾರೆ.

Home add -Advt

ಈ ಎಲ್ಲ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿರುವ ಸುರೇಶ ಕುಮಾರ, ಶಾಲೆಗಳನ್ನು ಆರಂಭಿಸುವ ಕುರಿತಂತೆ ಸರಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆ ಬಗ್ಗೆ ಅವಸರ ಕೂಡ ಮಾಡುವುದಿಲ್ಲ. ಈಗ ಎಲ್ಲ ಹಂತಗಳಲ್ಲಿ, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ನಡೆದಿದೆ ಎಂದರು.

ಚರ್ಚೆ ಪೂರ್ಣಗೊಂಡ ಬಳಿಕ ಸಮಗ್ರ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಲೆ ಆರಂಭಕ್ಕೆ ಮುನ್ನ ಎಲ್ಲ ದೃಷ್ಟಿಕೋನಗಳಿಂದಲೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುರೇಶ ಕುಮಾರ ಸ್ಪಷ್ಟಪಡಿಸಿದರು.

ವಿದ್ಯಾಗಮ ಯೋಜನೆ ಪುನಾರಂಭ ಕುರಿತು ಸಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಲಾಗುವುದು. ಸಧ್ಯ ಚರ್ಚೆ ಅಷ್ಟೆ ನಡೆಯುತ್ತಿದೆ. ನಿರ್ಧಾರ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ತಿಳಿಸಿದರು.

ಪತ್ರಕರ್ತ ಅರ್ನಬ್ ಗೋಸ್ವಾಮಿ ಪೊಲೀಸ್ ವಶಕ್ಕೆ

ಅರ್ನಬ್ ಬಂಧನಕ್ಕೆ 2018ರ ತಾಯಿ -ಮಗನ ಆತ್ಮಹತ್ಯೆ ಪ್ರಕರಣ ಕಾರಣ

ಶಾಲೆಗಳ ಪುನರಾರಂಭ; ನಾಳೆ ಮಹತ್ವದ ನಿರ್ಧಾರ

Related Articles

Back to top button