ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ವಿಕೋಪಕ್ಕೆ ಹೋಗಿರುವ ಹಿಜಾಬ್ – ಕೇಸರಿ ಶಾಲು ವಿವಾದ ಇತ್ಯರ್ಥಕ್ಕೆ ಹೈಕೊರ್ಟ್ ಮುಖ್ಯ ನ್ಯಾಯಾಧೀಶರು 3 ಸದಸ್ಯ ಪೀಠ ರಚಿಸಿದ್ದು, ಗುರುವಾರವೇ ವಿಚಾರಣೆ ಆರಂಭಿಸಲಿದೆ.
ಸ್ವತಃ ಮುಖ್ಯ ನ್ಯಾಯಾಮೂರ್ತಿಗಳೂ ಸದಸ್ಯರಾಗಿರುವ ಪೀಠದಲ್ಲಿ ನ್ಯಾಮೂರ್ತಿ ದೀಕ್ಷಿತ್ ಅವರೂ ಇದ್ದಾರೆ.
ಗುರುವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಆರಂಭವಾಗಲಿದೆ. ಈಗಾಗಲೆ ಸಲ್ಲಿಕೆಯಾಗಿರುವ ಎಲ್ಲ ದಾಖಲೆಗಳನ್ನೂ ತ್ರಿ ಸದಸ್ಯ ಪೀಠಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.
ಮಂಗಳವಾರ ಮತ್ತು ಬುಧವಾರ ಏಕ ಸದಸ್ಯ ಪೀಠದಿಂದ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ದೀಕ್ಷಿತ್ ಅವರು ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ವಿಸ್ತೃತ ತನಿಖೆ ಅಗತ್ಯವಿದೆ ಎಂದು ಮುಖ್ಯನ್ಯಾಯಮೂರ್ತಿಗಳಿಗೆ ಕಳಿಸಿದ್ದರು.
ಬಹು ನಿರೀಕ್ಷಿತ ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ