Latest

ಕೋವಿಡ್ ಕುರಿತು ವಿಜ್ಞಾನಿಗಳ ಎಚ್ಚರಿಕೆ, ಬೆಚ್ಚಿ ಬಿದ್ದ ಜಗತ್ತು  

ಕೇಪ್ ಟೌನ್ – ಕಳೆದ ಎರಡು ವರ್ಷಳಿಂದ ಇಡೀ ವಿಶ್ವವೇ ಕೊರೊನಾ ವೈರಸ್ ಕಾರಣದಿಂದ ನಲುಗಿವೆ. ಲಕ್ಷಾಂತರ ಸಾವುಗಳು ಸಂಭವಿಸಿವೆ. ಅಷ್ಟೇ ಅಲ್ಲ, ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳ ಆರ್ಥಿಕ ಸ್ಥಿತಿಯೇ ಬುಡಮೇಲಾಗುತ್ತಿದೆ.

ಒಂದೊಮ್ಮೆ ಕೋವಿಡ್ ಸಾಂಕ್ರಾಮಿಕ ಸಧ್ಯದಲ್ಲೇ ಮುಕ್ತಾಯಗೊಂಡರೂ ಈಗಾಗಲೇ ಬಿದ್ದಿರುವ ಆರ್ಥಿಕ ಹೊಡೆತ ಸರಿಪಡಿಸಿಕೊಳ್ಳಲು ಹಲವಾರು ವರ್ಷಗಳೇ ಬೇಕು ಎಂದು ತಜ್ಞರು ಹೇಳುತ್ತಿದ್ದಾರೆ. ಆದಾಗ್ಯೂ ಕೆಲವೆಡೆ ಓಮಿಕ್ರಾನ್ ವೈರಸ್ ಕೊವಿಡ್‌ನ ಅಂತಿಮ ರೂಪಾಂತರಿಯಾಗಲಿದೆ. ಈ ನಂತರದಲ್ಲಿ ಕೋವಿಡ್ ತಗುಲಿದರೂ ಸಹ ವೈರಸ್ ನಿರೋಧಕ ಶಕ್ತಿ ಮಾನವನ ದೇಹದಲ್ಲಿ ಉತ್ಪತ್ತಿಯಾಗಲಿವೆ ಎಂಬ ಒಂದಿಷ್ಟು ವರದಿಗಳು ಬಂದಿದ್ದು ಇಡೀ ವಿಶ್ವ ನೆಮ್ಮದಿಯ ನಿಟ್ಟುಸಿರೆಳೆದುಕೊಳ್ಳುತ್ತಿದೆ.

ಆದರೆ ಈ ನಿರೀಕ್ಷೆ ಹುಸಿಯಾಗಲಿದೆ, ಕೋವಿಡ್‌ನ ಮತ್ತಷ್ಟು ರೂಪಾಂತರಿಗಳು ದಾಳಿಯಿಡಲಿವೆ. ಕೋವಿಡ್ ಸಾಂಕ್ರಾಮಿಕ ಇಲ್ಲಿಗೇ ಅಂತ್ಯಗೊಂಡಿಲ್ಲ ಎಂದು ವಿಶ್ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದು ಜಗತ್ತನ್ನೇ ಬೆಚ್ಚಿಬೀಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಹೇಳಿಕೆ ನೀಡಿದ ಸೌಮ್ಯ ಸ್ವಾಮಿನಾಥನ್

Home add -Advt

ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಶುಕ್ರವಾರ ಇಂಥದ್ದೊಂದು ಎಚ್ಚರಿಕೆಯ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡೋರ್ಸ್ ಅದ್ನಾಮ್ ಗೆಬ್ರಿಯಾಸಿಸ್ ಅವರ ಜೊತೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಕೋವಿಡ್ ಲಸಿಕೆ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಕೋವಿಡ್‌ನ ಹೆಚ್ಚು ಹೆಚ್ಚು ರೂಪಾಂತರಗಳನ್ನು ನಾವು (ಡಬ್ಲುಎಚ್‌ಒ ವಿಜ್ಞಾನಿಗಳು) ಗುರುತಿಸಿದ್ದೇವೆ. ಕೊರೋನಾ ವೈರಸ್‌ಗಳು ಮೊದಲಿಗಿಂತ ಬಹಳ ವೇಗವಾಗಿ ಮತ್ತು ವಿಭಿನ್ನ ರೀತಿಯಲ್ಲಿ ರೂಪಾಂತರಗೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.

ಸಣ್ಣ ಘಟನೆಯನ್ನೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು; ಯಾವುದೇ  ಆದೇಶಗಳಿಗೆ ಕಾಯದೇ, ಸಂದರ್ಭಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಿ – ಎಸ್ಪಿ, ಡಿಸಿಗಳಿಗೆ ಸಿಎಂ ಆದೇಶ

Related Articles

Back to top button