Kannada NewsLatest

ಪುರುಷರಷ್ಟೇ ಕೆಲಸ ಮಾಡುವ ಛಲ ಮಹಿಳೆಯರಿಗಿದೆ: ಯುವ ನಾಯಕಿ ಪ್ರಿಯಾಂಕ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಘಟಪ್ರಭ: ಹೆಣ್ಣು ಮಕ್ಕಳು ಮನೆ ಕೆಲಸಕಷ್ಟೇ ಸೀಮಿತವಾಗದೇ ಪುರುಷರಷ್ಟೇ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತೇವೆ ಎಂಬ ಛಲ ಹೊಂದಬೇಕೆಂದು ಯುವ ನಾಯಕಿ ಪ್ರಿಯಾಂಕ ಸತೀಶ್‌ ಜಾರಕಿಹೊಳಿ ಹೇಳಿದರು.

ಇಲ್ಲಿನ ಡಾ. ಎನ್.‌ ಎಸ್.‌ ಹರ್ಡೇಕರ್‌ ಮಂಜಪ್ಪ ತರಬೇತಿ ಕೇಂದ್ರದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್ ಹಮ್ಮಿಕೊಂಡಿದ್ದ ಉಚಿತ ಉದ್ಯಮಶೀಲತಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರುಷರಷ್ಟೇ ಕೆಲಸ ಮಾಡುವ ಛಲ ಮಹಿಳೆಯರಿಗಿದೆ ಎಂದರು.

ನಾನು ಕೂಡ ಎಂಬಿಎ ವಿದ್ಯಾರ್ಥಿಯಾಗಿದ್ದು, ಯಾವುದೇ ಒಂದು ಉದ್ಯೋಗ ಆರಂಭಕ್ಕೂ ಮುನ್ನ ಅದರ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಂಡು ಉದ್ಯೋಗ ಆರಂಭಿಸಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ನಾ ಮಂದೆ, ನಿ ಮುಂದೆ ಎನ್ನುವ ಸ್ಪರ್ಧೆ ಇದೆ. ಕಾರಣ ನಾವು ಉದ್ಯೋಗದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯವೆಂದು ಸಲಹೆ ನೀಡಿದರು.

ಇಲ್ಲಿ ಬಂದ ಆಕಾಂಕ್ಷಿಗಳು ಎನಾದರೂ ಸಾಧಿಸಬೇಕೆಂಬ ಗುರಿ ಇಟ್ಟುಕೊಂಡು ಬಂದಿದ್ದು, ನಿಮ್ಮ ಗುರಿ ಮುಟ್ಟಲು ಸತೀಶ್‌ ಜಾರಕಿಹೊಳಿ ಫೌಂಡೇಶನ್ ಸದಾ ನಿಮ್ಮ ಪ್ರಗತಿಗೆ ಶ್ರಮಿಸುತ್ತದೆ. ನಿವು ಕೂಡ ಸರ್ಕಾರದ ಸೌಲಭ್ಯ ಪಡೆದು ಉದ್ಯಮ ಆರಂಭಿಸಬೇಕು. ಮಹಿಳೆಯರಿಗೆ ಸಾಕಷ್ಟು ಸರ್ಕಾರಿ ಸೌಲಭ್ಯಗಳಿವೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌ ಮಾತನಾಡಿ, ಯುವಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಟಿವಿ, ಪತ್ರಿಕೆ, ಸಾಮಾಜಿಕ ಮಾಧ್ಯಮದಲ್ಲಿಯೂ ನಿರುದ್ಯೋಗ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರವೂ ಯುವಕರಿಗೆ ಉದ್ಯೋಗ ನೀಡಲು ಆಸಕ್ತಿ ತೊರುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಶಾಸಕ ಸತೀಶ್‌ ಜಾರಕಿಹೊಳಿ ಅವರು ಈ ಭಾಗದ ಯುವಕರಿಗೆ ಉಚಿತ ಉದ್ಯಮಶೀಲತಾ ತರಬೇತಿ ನೀಡಲು ಮುಂದಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ್‌ ಯಲಿಗಾರ, ಶ್ರೀಕಾಂತ, ಶ್ರೀಧರ, ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಸೇರಿದಂತೆ ಡಾ. ಎನ್.‌ ಎಸ್.‌ ಹರ್ಡೇಕರ್‌ ಮಂಜಪ್ಪ ತರಬೇತಿ ಕೇಂದ್ರದ ಸಿಬ್ಬಂದಿ ಇದ್ದರು.
ಶಾಲೆ ಪುನರಾರಂಭಕ್ಕೆ ಮೊದಲ ಆದ್ಯತೆ ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button