ರಾಜಕೀಯ ಅಂದ ಮೇಲೆ ಪಕ್ಷದಿಂದ ಪಕ್ಷ ಬದಲಾಯಿಸುವುದು, ಇಲ್ಲಿದ್ದವರು ಅಲ್ಲಿಗೆ, ಅಲ್ಲಿದ್ದವರು ಇಲ್ಲಿಗೆ ಬರುವುದು ಮಾಮೂಲು. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಬರುತ್ತಾರೆ. ಈಗಾಗಲೇ ಮಾತುಕತೆಗಳು ನಡೆದಿವೆ
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ 17 ಶಾಸಕರು ಮತ್ತೆ ವಾಪಸ್ ಕಾಂಗ್ರೆಸ್ ಗೆ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜಕೀಯ ಅಂದ ಮೇಲೆ ಪಕ್ಷದಿಂದ ಪಕ್ಷ ಬದಲಾಯಿಸುವುದು, ಇಲ್ಲಿದ್ದವರು ಅಲ್ಲಿಗೆ, ಅಲ್ಲಿದ್ದವರು ಇಲ್ಲಿಗೆ ಬರುವುದು ಮಾಮೂಲು. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಬರುತ್ತಾರೆ. ಈಗಾಗಲೇ ಮಾತುಕತೆಗಳು ನಡೆದಿವೆ ಎಂದರು.
ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇದೆ. ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಕೆಲವರು ವಾಪಸ್ ಬಂದೆ ಬರ್ತಾರೆ. ವರಿಷ್ಠರು ಈ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ನಿಶಕ್ತರಾಗಿದ್ದಾರೆ ಎಂಬ ಸಿ.ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್, ಅವರು ನಂಬರ್ ಒನ್ ನಾಯಕ. ಇಡೀ ರಾಜ್ಯದಲ್ಲಿ ಅವರಿಗೆ ಅವರದ್ದೇ ಬೆಂಬಲಿಗರ ಪಡೆ ಇದೆ. ಅವರದ್ದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಾರೆ. ಯಾವತ್ತಿದ್ದರೂ ಅವರು ಕಾಂಗ್ರೆಸ್ ನಲ್ಲಿ ನಂಬರ್ ಒನ್ ನಾಯಕ ಎಂದು ಹೇಳಿದರು.
ಯಾವನೋ ಈಶ್ವರಪ್ಪ ಅಂತೆ, ತಲೆ ಕೆಟ್ಟ ಈಶ್ವರಪ್ಪ….ಏಕವಚನದಲ್ಲಿ ಕಿಡಿ ಕಾರಿದ ಡಿಕೆಶಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ