ಪ್ರಗತಿವಾಹಿನಿ ಸುದ್ದಿ; ಗುವಾಹಟಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ 1000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಒಂದು ಟ್ವೀಟ್ ವಿಚಾರವಾಗಿ ಅಸ್ಸಾಂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಹುಲ್ ವಿರುದ್ಧ ದೂರು ನೀಡಿದ್ದಾರೆ.
ಆದರೆ ಯಾವುದೇ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದೆಯೇ ಎಂಬುದು ಖಚಿತವಾಗಿಲ್ಲ.
ರಾಹುಲ್ ಗಾಂಧಿ ವಿರುದ್ಧ ಯುವ ಮೋರ್ಚಾ ಕಾರ್ಯಕರ್ತರು 1000ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ ಎಂದು ಅಸ್ಸಾಂ ಬಿಜೆ ಎಂ ಮಾಧ್ಯಮ ಸಂಚಾಲಕ ಬಿಸ್ವಜಿತ್ ಖೌಂಡ್ ತಿಳಿಸಿದ್ದಾರೆ. ಆದರೆ ದೂರು ದಾಖಲಿಸಿದ ಯಾವುದೇ ಪೊಲೀಸ್ ಠಾಣೆಗಳು ಅಥವಾ ಜಿಲ್ಲೆಯ ಹೆಸರನ್ನು ಹಂಚಿಕೊಂಡಿಲ್ಲ.
ಅರುಣಾಚಲ ಪ್ರದೇಶವು ತನ್ನ ಭಾಗವಾಗಿದೆ ಎಂಬ ಚೀನಾದ ಹೇಳಿಕೆಯನ್ನು ರಾಹುಲ್ ಗಾಂಧಿ ಅವರ ಟ್ವೀಟ್ ಒಂದು ಪರೋಕ್ಷವಾಗಿ ಬೆಂಬಲಿಸುತ್ತದೆ ಎಂಬ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ದೂರು ನೀಡಲಾಗಿದೆ.
ಇನ್ನು ರಾಜ್ಯದಲ್ಲಿ ಒಟ್ಟು 329 ಪೊಲೀ ಠಾಣೆಗಳು, 293 ಔಟ್ ಪೋಸ್ಟ್ ಗಳು ಮತ್ತು 151 ಗಸ್ತು ಠಾಣೆಗಳಿವೆ. ಹೊರ ಠಾಣೆ ಹಾಗೂ ಗಸ್ತು ಠಾಣೆಗಳಲ್ಲಿ ದೂರು ದಾಖಲಿಸಬಹುದಾದರೂ ಪೊಲೀಸ್ ಠಾಣೆಯಲ್ಲಿ ಮಾತ್ರ ಪ್ರಕರಣ ದಾಖಲಾಗುತ್ತದೆ ಎಂದು ಅಸ್ಸಾಂ ಪೊಲೀಸ್ ವಿಶೇಷ ಡಿಜಿಪಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ