ಮುಸ್ಲೀಂ ಪುರುಷರು ಏನು ಮಾಡುತ್ತಾರೋ ಎಂಬ ಭಯ, ರಕ್ಷಣೆ ಪಡೆಯಲು ಮಹಿಳೆಯರು ಬುರ್ಖಾ ಧರಿಸುತ್ತಾರೆ; ಆರ್.ಎಸ್.ಎಸ್ ಮುಖಂಡ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಿಂದೂಗಳು ಯಾವತ್ತೂ ಆಕ್ಷನ್ ಗೆ ಹೋಗಲ್ಲ, ರಿಯಾಕ್ಷಾನ್ ಮಾತ್ರ ನೀಡುತ್ತಾರೆ. ಅವರು ಹಿಜಾಬ್ ಧರಿಸಿದ್ದಕ್ಕೆ ಇವರು ಕೇಸರಿ ಶಾಲು ಧರಿಸಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರಭಾಕರ್ ಭಟ್, ಹಿಜಾಬ್ ವಿವಾದದ ಹಿಂದೆ ದೇಶ ವಿಭಜನೆಯ ಷಡ್ಯಂತ್ರವಿದೆ, ಇದೊಂದು ಪೂರ್ವನಿಯೋಜಿತ ಸಂಚು. ಹಾಗಾಗಿ ಎನ್ ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಹಿಜಾಬ್ ವಿಚಾರವಾಗಿ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹ್ಮದ್ ಹೇಳಿದ್ದು ಅವರ ಸಮುದಾಯದ ಬಗ್ಗೆ. ಮುಸ್ಲೀಂ ಮಹಿಳೆಯರು ಮನೆಯಲ್ಲಿಯೂ ಬುರ್ಖಾ ಧರಿಸುತ್ತಾರೆ. ಮುಸ್ಲೀಂ ಪುರುಷರು ಏನು ಮಾಡಿಬಿಡುತ್ತಾರೋ ಎಂಬ ಭಯಕ್ಕೆ. ಅರಬ್ ರಾಷ್ಟ್ರಗಳಲ್ಲಿ ಮಹಿಳೆಯರು ಬುರ್ಖಾ ಧರಿಸುತ್ತಿದ್ದರು. ಯಾಕೆಂದ್ರೆ ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಯುತ್ತೆಂದು ಹಾಕುತ್ತಾರೆ. ಅದೇ ರೀತಿ ಇಲ್ಲಿಯೂ ಮುಸ್ಲೀಂ ಮಹಿಳೆಯರು ಮನೆಯಲ್ಲಿಯೂ ಬುರ್ಖಾ ಹಾಕ್ತಾರೆ. ಕಾರಣ ಅವರ ಸಮುದಾಯದ ಪುರುಷರಿಂದ ರಕ್ಷಣೆ ಪಡೆಯಲು ಎಂದು ಹೇಳಿದರು.
ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಭಾಕರ್ ಭಟ್, ಜಮೀರ್ ಅಹ್ಮದ್ ಹೇಳಿದ್ದು ಅವರ ಸಮಾಜದ ಬಗ್ಗೆ. ಮುಸ್ಲೀಂ ಮಹಿಳೆಯರು ಮನೆಯಲ್ಲಿಯೂ ಬುರ್ಖಾ ಧರಿಸುತ್ತಾರೆ. ಅರಬ್ ದೇಶಗಳಲ್ಲಿ ಮುಸ್ಲೀಂ ಪುರುಷರು ಏನು ಮಾಡಿಬಿಡುತ್ತಾರೆಂಬ ಭಯಕ್ಕೆ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಕಾರಣ ಅವರ ಸಮುದಾಯದ ಪುರುಷರಿಂದ ರಕ್ಷಣೆ ಪಡೆಯಲು ಎಂದಿದ್ದಾರೆ.
ಹಿಜಾಬ್ ವಿವಾದವುಂಟಾದಾಗ ಸರ್ಕಾರ ಕ್ರಮ ಕೈಗೊಳ್ಳಲು ಹಿಂಜರಿಯಬಾರದು. ಶಾಲೆಗಳಿಗೆ ರಜೆ ನೀಡುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರೀ ವೈರಲ್ ಆದ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ