ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ದೆಹಲಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪಿಜಿಟಿ, ಟಿಜಿಟಿ, ಪಿಆರ್ ಟಿ, ಕಂಪ್ಯೂಟರ್ ಬೋಧಕ, ಡಿಇಒ, ಕ್ರೀಡಾ ಶಿಕ್ಷಕ, ಶೈಕ್ಷಣಿಕ ಸಲಹೆಗಾರ, ಕಲೆ ಮತ್ತು ಕರಕುಶಲ ಶಿಕ್ಷಕ, ಸಂಗೀತ ಶಿಕ್ಷಕ, ನೃತ್ಯ ಶಿಕ್ಷಕ, ನರ್ಸ್, ಯೋಗ ಶಿಕ್ಷಕರಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರಾಥಮಿಕ ಶಿಕ್ಷಕರು – ಅಭ್ಯರ್ಥಿಗಳು 50% ಅಂಕಗಳೊಂದಿಗೆ ಕನಿಷ್ಠ ಹಿರಿಯ ಮಾಧ್ಯಮಿಕ ಶಾಲಾ ಪ್ರಮಾಣಪತ್ರವನ್ನು ಹೊಂದಿರಬೇಕು ಅಲ್ಲದೆ DIET/JBT/B.Ed. ಮಾಡಿರಬೇಕು.
ಪಿಜಿಟಿ ಸಂಬಂಧಪಟ್ಟ ವಿಷಯದಲ್ಲಿ NCERT ಯ ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ ಎರಡು ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ MSc ಕೋರ್ಸ್ ಅಥವಾ ಮಾನ್ಯತೆ ಪಡೆದ
ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯಗಳಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಟಿಜಿಟಿ ಸಂಬಂಧಪಟ್ಟ ವಿಷಯದಲ್ಲಿ NCERT ಯ ಪ್ರಾದೇಶಿಕ ಶಿಕ್ಷಣ ಕಾಲೇಜಿನಿಂದ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಕೋರ್ಸ್ ಅಥವಾ ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಈ ಹುದ್ದೆಗಳಿಗೆ ನೇರ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪಿಜಿಟಿ, ಟಿಜಿಟಿ, ಪಿಆರ್ ಟಿ, ಕಂಪ್ಯೂಟರ್ ಬೋಧಕ ಹುದ್ದೆಗಳಿಗೆ ಫೆಬ್ರವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಪಿಆರ್ ಟಿ ಹುದ್ದೆಗಳಿಗೆ ಫೆಬ್ರವರಿ 25 ಹಾಗೂ ಇತರೆ ಹುದ್ದೆಗಳಿಗೆ ಫೆಬ್ರವರಿ 26 ಕೊನೆ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳವರು ಕೇಂದ್ರಿಯ ವಿದ್ಯಾಲಯದ ಅಧಿಕೃತ ವೆಬ್ ಸೈಟ್ rkpuramsec2.kvs.ac.inಗೆ ಭೇಟಿ ನೀಡಬಹುದು.
ಬಜೆಟ್‌ನಲ್ಲಿ ದೇವಸ್ಥಾನಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನದ ನಿರೀಕ್ಷೆ: ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ