
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ರಚಿಸುವ ಸಂಬಂಧ ಸಮಿತಿ ರಚಿಸಲು ಬರುವ ಬಜೆಟ್ ನಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಜೆಡಿಎಸ್ ನ ಶ್ರೀಕಂಠೇಗೌಡ ಪ್ರಶ್ನೆಗೆ ಅವರು ಉತ್ತರಿಸಿದರು. ರಾಜ್ಯದಲ್ಲಿ 2016 -17ರಲ್ಲಿ ವೇತನ ಪರಿಷ್ಕರಣೆಯಾಗಿದೆ. ಕೇಂದ್ರ ಸರಕಾರಿ ನೌಕರರಿಗೆ ಹೋಲಿಸಿದರೆ ವೇತನ ತಾರತಮ್ಯವಿದ್ದು 7ನೇ ವೇತನ ಆಯೋಗ ರಚಿಸಬೇಕೆನ್ನುವ ಬೇಡಿಕೆ ಇದೆ. ಸಂಪನ್ಮೂಲ ನೋಡಿಕೊಂಡು ಈ ಬಗ್ಗೆ ನಿರ್ಧರಿಸಲಾಗುವುದು. 7ನೇ ವೇತನ ಆಯೋಗ ರಚನೆ ಸಂಬಂಧ ಸಮಿತಿಯೊಂದನ್ನು ನೇಮಕ ಮಾಡಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಸರಕಾರ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾದಂತಹ ಸಂಕಷ್ಟದಲ್ಲೂ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ವೇತನ ತಾರತಮ್ಯವಿದೆ. ಅದನ್ನು ಸರಿಪಡಿಸಲು 7ನೇ ವೇತನ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ಸಿಗರ ಮನವೊಲಿಸಲು ಸಿಎಂ, ಸ್ಪೀಕರ್, ಬಿಎಸ್ವೈ ಯತ್ನ