ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠ ಬೆಳಗಾವಿ ಹುಕ್ಕೇರಿ ಹಿರೇಮಠದ ಮಠಾಧ್ಯಕ್ಷರಾಗಿರುವ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. ಸಂಸ್ಕೃತ ಭಾಷೆ ಉಳಿಯಲಿ ಎಂದು ತಮ್ಮ ಮಠದಿಂದ ಸಂಸ್ಕೃತದಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ಗೌರವಿಸುವುದರ ಮೂಲಕ ಸಂಸ್ಕೃತ ಪ್ರೇಮವನ್ನು ಎತ್ತಿ ಹಿಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಬೆಂಗಳೂರು ನಗರದ ಹೆಬ್ಬಾಳ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ಜರುಗಿದ ಸಮೇಕ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ, ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಕುಲಪತಿ ಡಾ. ಶ್ರೀನಿವಾಸ ವರಕೇಡಿ ಮಾತನಾಡಿ, ನಾವು ಸಂಸ್ಕೃತದಿಂದ ಸಾಕಷ್ಟು ಕಲಿಯುವುದು ಇದೆ. ದೇಶ, ವಿದೇಶದಲ್ಲಿ ಸಂಸ್ಕೃತಕ್ಕೆ ಹೆಚ್ಚಿನ ಮಾನ್ಯತೆ ಇದೆ. ನಾವೆಲ್ಲರೂ ಸಂಸ್ಕೃತವನ್ನು ಮನೆಯ ಭಾಷೆಯನ್ನಾಗಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹುಕ್ಕೇರಿ ಶ್ರೀಗಳು ಮಾಡುತ್ತ ನನಗೆ ಈ ಅದ್ಬುತವಾದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಮನಃ ತುಂಬಿ ನೆನೆಯುತ್ತೇನೆ ಎಂದರು.
ಸಾನಿದ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಕೃತ ಉಳಿಯಬೇಕಾಗಿತ್ತು ಎಂದರೆ ಮಡಿವಂತಿಕೆ, ಪ್ರತ್ಯೇಕತೆ ಬಿಡಬೇಕು ಅಂದಾಗ ಮಾತ್ರ ಸಂಸ್ಕೃತ ಉಳಿದು ಬೆಳೆಯಲು ಸಾಧ್ಯ. ಸಂಸ್ಕೃತದಿಂದ ನಾವು ಸಾಕಷ್ಟು ಕಲಿಯಬಹುದು. ಇಂದು ಸಂಸ್ಕೃತ ಭಾಷೆಯನ್ನು ಎಲ್ಲರೂ ಕಲಿಯಬೇಕಿದೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತವನ್ನು ಕಲಿತಿದ್ದಾರೆ. ಅದಕ್ಕಾಗಿ ಅವರಲ್ಲಿ ಸಂಸ್ಕೃತಿ ಇದೆ ಎಂದರು.
ಇದೇ ಸಂದರ್ಭದಲ್ಲಿ ಸಿಂಧೆ ಮಹಾವಿದ್ಯಾಲಯದ ನಿರ್ದೇಶಕ ಬಿ.ಎನ್.ಶ್ರೀಕಂಠ ಮಾತನಾಡಿದರು. ಸಿಂಧೆ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ಆಶಾ ಹಾಗೂ ಕೇಸರಿ ಪ್ರತಿಷ್ಠಾನದ ತಮ್ಮೇಶ ಗೌಡ, ಸಂಮೇಕ ಪ್ರತಿಷ್ಠಾನದ ಎಂ.ಆರ್.ಸತೀಶ, ಸಾಮಾಜಿಕ ಕಾರ್ಯಕರ್ತ ಮಹೇಶ ಮನೋಟಾ, ಪ್ರಕಾಶ ಸಾರಂಗ, ಡಾ.ಶ್ರೀಕಂಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುಮಾರು 200 ಜನ ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪಕ್ಷದ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ