Latest

ಬಜರಂಗದಳ ಕಾರ್ಯಕರ್ತನ ಹತ್ಯೆ ಸುದ್ದಿಕೇಳಿ ಶಾಕ್ ಆದ ಸೋದರತ್ತೆ; ಹೃದಯಾಘಾತದಿಂದ ಸಾವು

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಸುದ್ದಿ ಕೇಳಿ ಯುವಕನ ಸೋದರತ್ತೆ ಆಘಾತಕ್ಕೀಡಾಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ವಿಷಯ ಕೇಳಿ ಶಾಕ್ ಆದ ಹರ್ಷನ ಸೋದರತ್ತೆ ಜಲಜಾಕ್ಷಿ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Home add -Advt

ಶರಾವತಿ ನಗರದ ನಿವಾಸಿಯಾಗಿರುವ ಜಲಜಾಕ್ಷಿ ಹರ್ಷ ಮೃತಪಟ್ಟ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದರು. ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಅಂತ್ಯಕ್ರಿಯೆ ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನೆರವೇರಿದೆ. ಹರ್ಷನ ಅಂತ್ಯಕ್ರಿಯೆ ಬಳಿಕ ಸೋದರತ್ತೆ ಅಂತ್ಯಕ್ರಿಯೆ ಕೂಡ ನಡೆದಿದೆ.

ಹರ್ಷ ಕೊಲೆಯಲ್ಲಿ ಐವರು ಭಾಗಿ : ಗೃಹ ಸಚಿವ ಅರಗ ಜ್ಞಾನೇಂದ್ರ
ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲುಶಿಕ್ಷೆ

Related Articles

Back to top button