ಪ್ರಗತಿವಾಹಿನಿ ಸುದ್ದಿ: ಅಹಮದಾಬಾದ್; ಭಾರತದ 31ಮೀನುಗಾರರನ್ನು ಪಾಕಿಸ್ತಾನ ಮೆರಿಟೈಂ ಅಥಾರಿಟಿಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೀನುಗಾರರು ಪಾಕಿಸ್ತಾನ ವಿಶೇಷ ಆರ್ಥಿಕ ವಲಯ (ಇಇಝೆಡ್) ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದೇ ವೇಳೆ 5 ಮೀನುಗಾರಿಕೆ ಬೋಟ್‌ಗಳನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಮುದ್ರದಲ್ಲಿ 15 ನಾಟಿಕಲ್ ಮೈಲಿನ ಬಳಿಕ ಆಯಾ ದೇಶಗಳ ವಿಶೇಷ ಆರ್ಥಿಕ ವಲಯಗಳ ಗಡಿ ಪ್ರಾರಂಭವಾಗುತ್ತದೆ. ಪೂರ್ವಾನುಮತಿ ಪಡೆಯದೆ ಯಾವುದೇ ದೇಶದ ವಿಶೇಷ ಆರ್ಥಿಕ ವಲಯದೊಳಗೆ ಪ್ರವೇಶಿಸುವಂತಿಲ್ಲ. ಆದರೆ ಭಾರತದ ರಬ್ಬೀ ಸನಮುದ್ರದ ಗುಜರಾತ್- ಪಾಕಿಸ್ತಾನ ಸಮುದ್ರ ಗಡಿಯಲ್ಲಿ ಎರಡೂ ದೇಶಗಳ ಮೀನುಗಾರಿಕೆ ಹಡುಗುಗಳು ಅನೇಕ ಬಾರಿ ಅರಿವಿಲ್ಲದೇ ಮತ್ತೊಂದು ದೇಶದ ಇಇಝೆಡ್ ವ್ಯಾಪ್ತಿಯೊಳಗೆ ಪ್ರವೇಶಿಸುತ್ತವೆ.
ಇದೇ ರೀತಿ ಭಾನುವಾರ ಭಾರತದ ಐದು ಮೀನುಗಾರಿಕೆ ಹಡಗುಗಳು ಆಕಸ್ಮಿಕವಾಗಿ ಪಾಕ್ ಸಮುದ್ರ ಗಡಿಯೊಳಗೆ ಪ್ರವೇಶಿಸಿವೆ. ಗಡಿರೇಖೆಯನ್ನು ಸಮುದ್ರದಲ್ಲಿ ನಿಖರವಾಗಿ ಗುರುತಿಸಲು ಕಷ್ಟವಾಗಿರುವುದು ಈ ಅಕ್ರಮ ಪ್ರವೇಶಕ್ಕೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಜರಂಗದಳ ಕಾರ್ಯಕರ್ತನ ಹತ್ಯೆ ಸುದ್ದಿಕೇಳಿ ಶಾಕ್ ಆದ ಸೋದರತ್ತೆ; ಹೃದಯಾಘಾತದಿಂದ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ