Kannada NewsKarnataka NewsLatest

​ಬೆಳಗಾವಿ ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಬೆಳಗಾವಿ ಗ್ರಾಮೀಣ​ ಕ್ಷೇತ್ರದ ಗೆಜಪತಿ ಹಾಗೂ ಹುಲಿಕವಿ ಗ್ರಾಮಗಳ ರಸ್ತೆಗಳ ಅಭಿವೃದ್ಧಿ​ ಕಾಮಗಾರಿಗೆ ​ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.

​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು​ ಹಾಗೂ ​ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ​ ಪೂಜೆ​ ನೆರವೇರಿಸಿದರು. ಪಂಚಾಯಿತಿ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಈ ರಸ್ತೆಗಳಿಗೆ ಒಟ್ಟೂ 20 ಲಕ್ಷ ರೂ. ಮಂಜೂರಾಗಿದೆ.
​ 
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ‌ ಹಿರಿಯರು, ಬಸವಣ್ಣೆಪ್ಪ, ರಾಮಪ್ಪ ಲಂಗೂಟಿ, ಸಿದ್ದಪ್ಪ ಯರಗೊಪ್ಪ, ಶಂಕರಗೌಡ ಪಾಟೀಲ, ಸಂತೋಷ ಬಂಡವ್ವಗೋಳ, ಅಶೋಕ ಪಾಟೀಲ, ಸಿದ್ದು ಚಾಪಗಾಂವಿ, ಬಸವಂತ ನಾಯ್ಕ, ವಿಠ್ಠಲ ಅರ್ಜುನವಾಡಿ, ರಮೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Home add -Advt

Related Articles

Back to top button