ಪ್ರಗತಿವಾಹಿನಿ ಸುದ್ದಿ; ಕ್ಯಾಲಿಫೋರ್ನಿಯಾ: ವ್ಯಕ್ತಿಯೊಬ್ಬ ತನ್ನ ಮೂವರು ಪುತ್ರಿಯರು ಹಾಗೂ ಮತ್ತೋರ್ವ ವ್ಯಕ್ತಿಯನ್ನು ಗುಂಡಿಟ್ಟು ಕೊಂದು ಬಳಿಕ ಸ್ವತಃ ತಾನೂ ಶೂಟ್ ಮಾಡಿಕೊಂಡು ಮೃತಪಟ್ಟ ದಾರುಣ ಘಟನೆ ಅಮೇರಿಕಾದ ಕ್ಯಾಲಿಫೋರ್ನಿಯಾದ ಸ್ಯಾಕ್ರಮ್ಯಾಂಟೊ ಚರ್ಚ್ ಆವಾರದಲ್ಲಿ ನಡೆದಿದೆ.
ವ್ಯಕ್ತಿಯ ಪತ್ನಿ ಆತನಿಂದ ವಿಚ್ಛೇದನ ಪಡೆದಿದ್ದಳು. ತಿಂಗಳಿಗೊಮ್ಮೆ ಪುತ್ರಿಯರನ್ನು ಭೇಟಿ ಮಾಡುವ ಅವಕಾಶವನ್ನು ಆತ ಪಡೆದಿದ್ದ. ಅದೇ ರೀತಿ ಸ್ಯಾಕ್ರಮ್ಯಾಂಟೊ ಚರ್ಚ್ ಆವಾರದಲ್ಲಿ ತಂದೆಯನ್ನು ಭೇಟಿ ಮಾಡಲು ಸೋಮವಾರ ಸಂಜೆ ಬಂದಿದ್ದ ಪುತ್ರಿಯರನ್ನು ಗುಂಡಿಟ್ಟು ಕೊಂದಿದ್ದಾನೆ. ಜೊತೆಗೆ ಪುತ್ರಿಯರನ್ನು ಕರೆತಂದಿದ್ದ ವ್ಯಕ್ತಿಯನ್ನು ಸಹ ಶೂಟ್ ಮಾಡಿದ್ದಾನೆ. ಅಂತಿಮವಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚರ್ಚ್ ಆವಾರದಲ್ಲಿ ಕ್ಷಣ ಮಾತ್ರದಲ್ಲಿ ಐದು ಹೆಣಗಳು ಉರುಳಿವೆ.
ಘಟನೆ ನಡೆದ ಸಮೀಪದಲ್ಲೇ ಪೊಲೀಸ್ ಠಾಣೆಯಿದ್ದು ಚರ್ಚ್ ಸಿಬ್ಬಂದಿ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಸ್ಕಾಟ್ ಜೋನ್ಸ್, ಗುಂಡು ಹಾರಿಸಿದ ವ್ಯಕ್ತಿ 39 ವರ್ಷದವನಾಗಿದ್ದು ಮೂವರು ಪುತ್ರಿಯರು ತಲಾ 13, 10 ಮತ್ತು 9 ವರ್ಷದವರಾಗಿದ್ದಾರೆ ಎಂದು ತಿಳಿಸಿದ್ದು ಹೆಸರನ್ನು ಬಹಿರಂಗಪಡಿಸಿಲ್ಲ.
ರಷ್ಯಾ ಕ್ಷಿಪಣಿ ದಾಳಿಗೆ ರಾಜ್ಯದ ವಿದ್ಯಾರ್ಥಿ ಬಲಿ
ವಿಚಾರಣಾಧೀನ ಕೈದಿ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ