Latest

ಟಿವಿ ಟವರ್ ಮೇಲೆ ಬಾಂಬ್ ದಾಳಿ; 5 ಜನ ಸಾವು; ಚಾನಲ್ ಗಳು ಸಂಪೂರ್ಣ ಸ್ಥಗಿತ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಇಂದು ರಾಜಧಾನಿ ಕೀವ್ ನಲ್ಲಿರುವ ಟಿವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಿಂದ ಇಡೀ ಉಕ್ರೇನ್ ನಾದ್ಯಂತ ಟಿವಿ ಚಾನಲ್ ಗಳ ಪ್ರಸಾರವೇ ನಿಂತಿದೆ.

ಟಿವಿ ಟವರ್ ಮೇಲಿನ ದಾಳಿಯಲ್ಲಿ 5 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. 2ನೇ ಮಹಾಯುದ್ಧದ ಕಾಲದಲ್ಲಿ ಸಾಹೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮಾರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೂ ಹಾನಿಯಾಗಿದೆ.

ಈ ದಾಳಿಗೂ ಮುನ್ನ ರಷ್ಯಾ ಸೇನೆ ಕೀವ್ ನಲ್ಲಿ ಪ್ರಬಲ ದಾಳಿ ನಡೆಸುವುದಾಗಿ ಹಾಗೂ ಯುದ್ಧದ ಬಗ್ಗೆ ಮಾಹಿತಿ ಸಿಗದಂತೆ ಮಾಡುವುದಕ್ಕೋಸ್ಕರ್​, ಉಕ್ರೇನ್​ ರಾಜಧಾನಿ ಕೀವ್​​ನಲ್ಲಿರುವ ಇನ್​ಫಾರ್ಮೇಶನ್​ ಮತ್ತು ಸೈಕಾಲಜಿಕಲ್​ ಸೆಂಟರ್​ ಮೇಲೆ ಕೂಡ ಆಕ್ರಮಣ ಮಾಡುವುದಾಗಿ ಹೇಳಿತ್ತು. ಜನರು ಕೀವ್ ಪ್ರದೇಶ ತೊರೆಯುವಂತೆಯೂ ಸೂಚಿಸಿತ್ತು. ಸೂಚನೆ ಬೆನ್ನಲ್ಲೇ ದಾಳಿ ನಡೆಸಿದೆ.

ಇದೇ ವೇಳೆ ಖಾರ್ಕಿವ್ ನಗರದಲ್ಲಿಯೂ ಭೀಕರ ಶೆಲ್ ದಾಳಿ ಮುಂದುವರೆಸಿರುವ ರಷ್ಯಾ ಇಲ್ಲಿ ನಡೆಸಿದ ರಾಕೆಟ್ ದಾಳಿಗೆ 11 ಜನ ಮೃತಪಟ್ಟಿದ್ದು, 35ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button