
ಪ್ರಗತಿವಾಹಿನಿ ಸುದ್ದಿ; ಮುಂಬೈ: ಖ್ಯಾತ ಬಾಲಿವುಡ್ ತಾರೆ ಆಲಿಯಾ ಭಟ್ ತಲೆಗೆ ಮರದ ರೆಂಬೆ ಬಡಿದು ಭಾರಿ ಅನಾಹುತವಾಗಬಹುದಾಗಿದ್ದ ದುರಂತ ಫೋಟೊಗ್ರಾಫರ್ ಒಬ್ಬರ ಸಮಯಪ್ರಜ್ಞೆಯಿಂದ ತಪ್ಪಿದೆ. ಕೂದಲೆಳೆಯ ಅಂತರದಲ್ಲಿ ಆಲಿಯಾ ಅಪಾಯದಿಂದ ಪಾರಾಗಿದ್ದಾರೆ.
ಆಲಿಯಾ ಮತ್ತು ಅಜಯ್ ದೇವಗನ್ ಅಭಿನಯದ ಬಹು ನಿರೀಕ್ಷಿತ ಗಂಗೂಬಾಯಿ ಕಾತಿವಾಡಿ ಚಲನಚಿತ್ರ ದೇಶಾದ್ಯಂತ ಫೆ.25ರಂದು ಬಿಡುಗಡೆಯಾಗಿದೆ. ಚಿತ್ರದ ಪ್ರಮೋಶನ್ ಕಾರ್ಯವೂ ಜೋರಾಗಿ ನಡೆದಿದ್ದು ಆಲಿಯಾ ಸೇರಿದಂತೆ ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಸಿನೇಮಾ ಪ್ರಚಾರದ ಸಂದರ್ಭವೊಂದರಲ್ಲಿ ಆಲಿಯಾ ಭಟ್ ತೆರೆದ ಬಸ್‌ನಲ್ಲಿ ಗಂಗೂಬಾಯಿ ಕಾಠಿಯಾವಾಡಿಯ ಅವರ ಪಾತ್ರದ ಪೋಷಾಕಿನಂತೆ ಬಿಳಿ ಸೀರೆಯುಟ್ಟು ನಿಂತಿದ್ದರು. ಬಸ್ ಚಲಿಸುತ್ತಿದ್ದಂತೆ ಮರದ ಕೊಂಬೆಯೊಂದು ಬಸ್ ಸಮೀಪ ಬಂದಿದೆ. ಆದರೆ ಜನರೆಡೆಗೆ ಲಕ್ಷ್ಯ ವಹಿಸಿ ಕೈ ಬೀಸುತ್ತಿದ್ದ ಆಲಿಯಾ ಮರದ ರೆಂಬೆಯನ್ನು ಗಮನಿಸಿಲ್ಲ. ಇನ್ನೇನು ರೆಂಬೆ ಆಲಿಯಾ ಭಟ್ ಹಣೆಗೆ ಬಡಿಯಲಿದೆ ಎನ್ನುವಾಗ ಅದನ್ನು ಗಮನಿಸಿದ ಸ್ಥಳದಲ್ಲೇ ಇದ್ದ ಫೋಟೊಗ್ರಾಫರ್ ಒಬ್ಬರು ಆಲಿಯಾರನ್ನು ಎಳೆದು ಬದಿಗೆ ಸರಿಸಿದ್ದಾರೆ. ಇನ್ನೊಂದು ಕೈಯ್ಯಲ್ಲಿ ರೆಂಬೆಯನ್ನು ಮೇಲೆತ್ತಿ ಹಿಡಿದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ. ಫೋಟೊಗ್ರಾಫರ್‌ಗೆ ಆಲಿಯಾ ಭಟ್ ಮತ್ತು ಕಾತಿವಾಡಿ ಚಿತ್ರತಂಡ ಮತ್ತು ಆಲಿಯಾ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ.
ಕೆಜಿಎಫ್-2 ಟ್ರೇಲರ್ ರಿಲೀಸ್ ಗೆ ಡೇಟ್ ಫಿಕ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ