Latest

ನಟಿ ಸಂಜನಾ ಗಲ್ರಾಣಿಗೆ ಅಶ್ಲೀಲ ಸಂದೇಶ; ಆಡಂ ಬಿದ್ದಪ್ಪ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಅವರಿಗೆ ಅವಾಚ್ಯ ಪದಗಳಿಂದ ನಿಂದಎ, ಅಶ್ಲೀಲ ಸಂದೇಶ ರವಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಫ್ಯಾಷನ್ ಡಿಸೈನರ್, ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಜನಾ ಸ್ನೇಹಿತರಾಗಿದ್ದ ಆಡಂ ಬಿದ್ದಪ್ಪ, ಫೆ.25ರಂದು ರಾತ್ರಿ ಸಂಜನಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ನಟಿ ಸಂಜನಾ ಇಂದಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಾಟ್ಸಪ್ ಸಂದೇಶದ ದಾಖಲೆಯನ್ನು ನೀಡಿದ್ದರು.

Home add -Advt

ಸಂಜನಾ ದೂರು ಹಿನ್ನೆಲೆಯಲ್ಲಿ ಆಡಂ ಅವರನ್ನು ವಿಚಾರಿಸಿದಾಗ ತಾವು ಅಂತಹ ಮೆಸೇಜ್ ಕಳುಹಿಸಿಲ್ಲ ಎಂದಿದ್ದಾರೆ. ಅಲ್ಲದೇ ಮೊಬೈಲ್ ನಲ್ಲಿದ್ದ ವಾಟ್ಸಪ್ ಮೆಸೇಜ್ ಗಳನ್ನು ಡಿಲಿಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಡಂ ಬಿದ್ದ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಆಡಂ ಮೊಬೈಲ್ ಪಡೆದು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್ ರಿಟ್ರೀವ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮೊದಲ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ; ನಿರೀಕ್ಷೆಗಳು ಹಲವು

Related Articles

Back to top button