Latest

ಮತ್ತೋರ್ವ ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ನಲ್ಲಿ ರಷ್ಯಾ ಯುದ್ಧ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಲ್ಲಿ ಇದೀಗ ಭಾರತದ ಮತ್ತೋರ್ವ ವಿದ್ಯಾರ್ಥಿಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಕ್ರೇನ್ ನ ಕೀವ್ ನಗದರಲ್ಲಿ ರಷ್ಯಾ ಭೀಕರ ದಾಳಿ ಮುಂದುವರೆಸಿದೆ. ಕಂಡ ಕಂಡಲ್ಲಿ ಗುಂಡಿನ ದಾಳಿ ಬಾಂಬ್ ಸ್ಫೋಟ ನಡೆಯುತ್ತಿದ್ದು, ಕೀವ್ ನಿಂದ ಕಾಲ್ನಡಿಗೆಯಲ್ಲಿ ಗಡಿಯತ್ತ ಬರುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಮಾರ್ಗ ಮಧ್ಯೆಯೇ ವಾಪಸ್ ಆಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ.

Home add -Advt

ಮತ್ತೊಂದೆಡೆ ಉಕ್ರೇನ್ ನಲ್ಲಿ ರೈಲು ಹತ್ತಲು ಹೋದ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನಿಯೊಬ್ಬ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ಕೂಡ ನಡೆದಿದೆ. ಯುದ್ಧ ಪೀಡಿತ ಉಕ್ರೇನ್ ನಲ್ಲಿ ಕ್ಷಣ ಕ್ಷ್ಣಕ್ಕೂ ಭಾರತೀಯರು ಜೀವ ಭಯದಲ್ಲಿ ಬದುಕುತ್ತಿದ್ದು, ಗಡಿ ಪ್ರದೇಶಗಳತ್ತ ಬರಲು ಹರಸಾಹಸ ಪಡುವಂತಾಗಿದೆ.

ಭಾರತೀಯ ರಾಯಭಾರ ಕಚೇರಿ ಕೀವ್ ನಗರ ತೊರೆಯುವಂತೆ ಭಾರತೀಯರಿಗೆಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಕಾಲ್ನಡಿಗೆಯಲ್ಲಿಯೇ ಗಡಿಯತ್ತ ಧಾವಿಸುತಿದ್ದಾರೆ.
ನಟಿ ಸಂಜನಾ ಗಲ್ರಾಣಿಗೆ ಅಶ್ಲೀಲ ಸಂದೇಶ; ಆಡಂ ಬಿದ್ದಪ್ಪ ಅರೆಸ್ಟ್

Related Articles

Back to top button