ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ಮಾಪಕ ರಿಷಬ್ ಶೆಟ್ಟಿ ದಂಪತಿಗಳು 2ನೇ ಮಗು ಆಗಮನದ ಸಂತಸದಲ್ಲಿದ್ದಾರೆ. ಈ ವಿಚಾರವನ್ನು ರಿಷಬ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.
2019 ಏಪ್ರಿಲ್ 7 ರಂದು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ರಣ್ವಿತ್ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾರೆ. ಇದೀಗ ಈ ಕುಟುಂಬ 2ನೇ ಸದಸ್ಯನ ಆಗಮ ಕುಟುಂಬದ ಖುಷಿಯನ್ನು ಹೆಚ್ಚಿಸಿದೆ.
ಪತ್ನಿಯಷ್ಟೇ ಚಂದದ ಹೆಣ್ಣು ಮಗು ಹುಟ್ಟಿದೆ. ಪತ್ನಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ದಂಪತಿ ಇಬ್ಬರು ಒಟ್ಟಿಗೆ ಇರುವ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ.
ಶುಭ ಸುದ್ದಿ ತಿಳಿದ ಅಭಿಮಾನಿಗಳು, ಸಿನಿಮಾರಂಗ ಶುಭಕೋರುತ್ತಿದ್ದಾರೆ.
ನಟಿ ಸಂಜನಾ ಗಲ್ರಾಣಿಗೆ ಅಶ್ಲೀಲ ಸಂದೇಶ; ಆಡಂ ಬಿದ್ದಪ್ಪ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ