ಲೈಂಗಿಕ ಸಂಬಂಧ ಬೇಡ ಎನ್ನುವುದು ಕ್ರೌರ್ಯ ಎಂದ ಹೈಕೋರ್ಟ್; ವಿಚ್ಛೇದನಕ್ಕೆ ಅಸ್ತು

ಪ್ರಗತಿವಾಹಿನಿ ಸುದ್ದಿ ಬಿಲಾಸ್‌ಪುರ್:  ಪತಿ ಅಥವಾ ಪತ್ನಿ ಪರಸ್ಪರರೊಂದಿಗೆ ಲೈಂಗಿಕ ಸಂಬಂಧ ಹೊಂದುವುದನ್ನು ದೀರ್ಘ ಕಾಲ ನಿರಾಕರಿಸುವುದು ಕೌಟುಂಬಿಕ ಕ್ರೌರ್ಯ ಎಂದು ಛತ್ತೀಸ್‌ಗಡ ಹೈಕೋರ್ಟ್ ಹೇಳಿದೆ.

ವಿವಾಹ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ನೀಡಿದೆ. ಜಸ್ಟೀಸ್ ಪಿ. ಸ್ಯಾಮ್ ಕೋಶಿ ಮತ್ತು ಪಾರ್ಥ ಪ್ರತೀಮ್ ಸಾಹು ಅವರಿದ್ದ ನ್ಯಾಯ ಪೀಠ ವಿವಾಹ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ನಡೆಸಿತ್ತು.

ವಿವಾಹದ ನಂತರ ಪತಿ ಪತ್ನಿ ಪರಸ್ಪರ ದೈಹಿಕ ಸಂಬಂಧ ಹೊಂದಿರಬೇಕಿರುವುದು ನೈಸರ್ಗಿಕ ಕ್ರಿಯೆ. ಪ್ರಕರಣದಲ್ಲಿ ಪತ್ನಿ ದೈಹಿಕ ಸಂಬಂಧಕ್ಕೆ ನಿರಾಕರಿಸುವ ಮೂಲಕ ಪತಿಯ ಮೇಲೆ ಕೌಟುಂಬಿಕ ಕ್ರೌರ್ಯ ಎಸಗಿದ್ದಾಳೆ ಎಂದು ಅಭಿಪ್ರಾಯಪಟ್ಟಿದೆ.

ಛತ್ತೀಸ್‌ಗಡದ ಬಿಲಾಸ್‌ಪುರದ ವ್ಯಕ್ತಿಯೊಬ್ಬ ಬೆಮೆತಾರಾ ಜಿಲ್ಲೆಯ ಯುವತಿಯೊಂದಿಗೆ ನವೆಂಬರ್ ೨೫, ೨೦೦೭ರಲ್ಲಿ ವಿವಾಹವಾಗಿದ್ದ. ೨೦೦೮ರಲ್ಲಿ ತೀಜ್ ಹಬ್ಬದ ನಿಮಿತ್ತ ತವರಿಗೆ ತೆರಳಿದ ಪತ್ನಿ ವಾಪಸ್ ಬಂದಿರಲಿಲ್ಲ. ಅಂತೂ ೨೦೧೧ರಲ್ಲಿ ಪತ್ನಿ ಗಂಡನ ಮನೆಗೆ ವಾಪಸ್ ಬಂದಳು. ಬಳಿಕ ೨೦೧೧ರಲ್ಲಿ ಆಕೆಯ ತಂದೆ ನಿಧನರಾದಾಗ ಮತ್ತೆ ತವರಿಗೆ ಹೋದವಳು, ಪ್ರಮುಖ ಹಬ್ಬ, ಧಾರ್ಮಿಕ ಆಚರಣೆಗಳಿಗೆ ಮಾತ್ರ ಗಂಡನ ಮನೆಗೆ ಬರುತ್ತಿದ್ದಳು.

Home add -Advt

ಆದರೆ ಜುಲೈ ೨೦೧೪ರಲ್ಲಿ ತವರಿಗೆ ಹೋದವಳು ತಿರುಗಿ ಬರಲಿಲ್ಲ. ಇದರಿಂದ ನೊಂದ ಪತಿ ೨೦೧೭ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ, ಆದರೆ ಕೌಟುಂಬಿಕ ನ್ಯಾಯಾಲಯ ಈತನ ಅರ್ಜಿಯನ್ನು ತಿರಸ್ಕರಿಸಿತ್ತು. ಅಂತಿಮವಾಗಿ ಹೈ ಕೋರ್ಟ್ ಮೊರೆ ಹೋಗಿದ್ದ ಪತಿಯ ಪರ ಹೈ ಕೋರ್ಟ್ ನ್ಯಾಯಪೀಠ ನಿಂತಿತು. ಪತಿ ಪತ್ನಿಗೆ ವಿವಾಹ ವಿಚ್ಛೇದನ ದಯಪಾಲಿಸಿದೆ.

ಪುನೀತ್ ಜೊತೆ ಅಭಿನಯಿಸಿದ್ದ ನಟಿ ಬಿಚ್ಚಿಟ್ಟ ಕಹಿ ಅನುಭವ !

ವಿಶ್ವದ ಅತಿದೊಡ್ಡ ವಿಮಾನ ಧ್ವಂಸ!

Related Articles

Back to top button