ಸಹಾಯ ಮಾಡಲು ಹೋಗಿ ಉಗಿಸಿಕೊಂಡ ಪಾಕ್ ಸರ್ಕಾರ.
ಕಾಬೂಲ್ : ಯಾಕೋ ಇತ್ತೀಚೆಗೆ ಪಾಕಿಸ್ತಾನದ ಅದೃಷ್ಟವೇ ಕೆಟ್ಟಂತಿದೆ. ಯುದ್ಧದ ಮುನ್ನಾ ದಿನ ರಷ್ಯಾದ ಕೈಕುಲುಕಲು ಹೋದ ಪ್ರಧಾನಿ ಇಮ್ರಾನ್ ಖಾನ್ ಅಮೇರಿಕಾದ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಬಿಲಿಯನ್ ಡಾಲರ್ಗಟ್ಟಲೆ ದಂಡ ಹೆಟ್ಟಿಸಿಕೊಂಡಿದ್ದಾಯ್ತು. ಈಗ ಯಾವ ಅಪಘಾನ್ನ ತಾಲಿಬಾನ್ ಉಗ್ರರನ್ನು ದಶಕಗಳ ಕಾಲ ಸಲಹಿತ್ತೋ ಅದೇ ತಾಲಿಬಾನ್ ಸರ್ಕಾರ ಪಾಕ್ನ ಸಣ್ಣ ಬುದ್ದಿಗೆ ಮುಖಕ್ಕೆ ಉಗಿದಿದೆ.
ಕೆಟ್ಟ ಗೋದಿ ಕೊಟ್ಟ ಪಾಕ್
ಅಪಘಾನಿಸ್ತಾನದಲ್ಲಿ ಭೀಕರ ಚಳಿಯಿಂದ ಬರಗಾಲ ಬಿದ್ದಿದೆ. ಮೊದಲೇ ಯುದ್ಧದಲ್ಲಿ ಬೆಂದಿರುವ ಜನ ಈಗ ಊಟಕ್ಕಿಲ್ಲದೆ ಸಾಯುತ್ತಿದ್ದಾರೆ. ದೇಶದ ಜನರನ್ನು ಉಳಿಸಿಕೊಳ್ಳಲು ಅಲ್ಲಿನ ತಾಲಿಬಾನ್ ಸರ್ಕಾರ ಹೆಣಗಾಡುತ್ತಿದೆ. ಮೊದಲಿನ ಪೆಡಸುತನ ಹೋಗಿ ನರಮ್ ಆಗಿದ್ದು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಅಂಗಲಾಚುತ್ತಿದೆ.
ಈ ಕಾರಣಕ್ಕಾಗಿ ಭಾರತ ಮತ್ತು ಪಾಕ್ ಎರಡೂ ದೇಶಗಳು ಅಪಘಾನಿಸ್ತಾನಕ್ಕೆ ಮಾನವೀಯ ನೆಲೆಯಲ್ಲಿ ಆಹಾರ ಸಾಮಗ್ರಿ ಪೂರೈಸುತ್ತಿವೆ. ಭಾರತ ೨೦೦ ಟ್ರಕ್ ಲೋಡ್ಗಳಲ್ಲಿ ಒಟ್ಟು ೫೦ ಸಾವಿರ ಮೆಟ್ರಿಕ್ ಟನ್ ಗೋದಿ ಕಳುಹಿಸಿದೆ. ಭಾರತದ ಕಳುಹಿಸಿದ ಗೋದಿ ಉತ್ತಮ ಗುಣಮಟ್ಟದ್ದೆಂದು ಅಪಘಾನ್ ಸರ್ಕಾರ ಹೊಗಳಿದೆ.
ಇದೇ ವೇಳೆ ಪಾಕ್ ಕೂಡ ಗೋದಿ ಕಳುಹಿಸಿದ್ದು, ಒಂದು ಕಾಳು ಸಹ ಬಳಕೆಗೆ ಯೋಗ್ಯವಾಗಿಲ್ಲ. ಕೆಟ್ಟು ಹುಳ ಹಿಡಿದಿರುವ ಗೋದಿ ಕಳುಹಿಸಿ ಸಹಾಯ ಮಾಡಿದಂತೆ ಪೋಸ್ ನೀಡಲು ಯತ್ನಿಸಿದ್ದ ಪಾಕ್ ಸರ್ಕಾರಕ್ಕೆ ಅಪಘಾನಿಸ್ತಾನ ಜಾಡಿಸಿದೆ.
ಸುದ್ದಿಗೋಷ್ಟಿಯಲ್ಲೇ ಈ ಬಗ್ಗೆ ಮಾತನಾಡಿದ ಅಪಘಾನಿಸ್ತಾನ ಸರ್ಕಾರದ ಪ್ರತಿನಿಧಿಗಳು ಪಾಕಿಸ್ತಾನ ಹಾಳು ಗೋದಿ ಕಳುಹಿಸಿದ್ದು ಅದರ ಸಣ್ಣತನಕ್ಕೆ ಸಾಕ್ಷಿ ಎಂದಿದ್ದಾರೆ. ಆದರೆ ಭಾರತ ಯಾವತ್ತೂ ಅಪಘಾನ್ ಜೊತೆ ಸ್ನೇಹದಿಂದ ಇದ್ದು ಉತ್ತಮ ಗೋದಿ ಕಳುಹಿಸಿದೆ ಎಂದು ಹೊಗಳಿದ್ದಾರೆ.
ಈ ಮೊದಲೂ ಒಮ್ಮೆ ಅಪಘಾನಿಸ್ತಾನಕ್ಕೆ ಮಾನವೀಯತೆಯ ಆಧಾರದಲ್ಲಿ ಭಾರತ ಸುಮಾರು ೫೦ ಟ್ರಕ್ ಲೋಡ್ನಷ್ಟು ಗೋದಿ ಕಳುಹಿಸಲು ಮುಂದಾದಾಗ ಪಾಕಿಸ್ತಾನ ಅಪಘಾನ್ಗೆ ತೆರಳುವ ದಾರಿ ಬಿಟ್ಟುಕೊಡಲು ನಿರಾಕರಿಸಿತ್ತು. ಈ ವಿಷಯ ಸಹ ಅಪಘಾನಿಸ್ತಾನದ ತಾಲಿಬಾನ್ ಸರಕಾರದ ಆಕ್ರೋಶಕ್ಕೆ ಕಾರಣವಾಗಿದೆ.
ಅಪರೂಪದ ಅವಳಿ ಪೊಲೀಸ್ ಅಧಿಕಾರಿಗಳು: ಎಕ್ಸ್ಚೇಂಜ್ ಆದರೂ ಗೊತ್ತಾಗಲ್ಲ ಎಂದ ಜನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ