ಪ್ರಗತಿವಾಹಿನಿ ಸುದ್ದಿ; ಅಮೃತಸರ: ಬಿಎಸ್ ಎಫ್ ಯೋಧನೊಬ್ಬ ತನ್ನ ಸಹದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಐವರು ಯೋಧರು ಮೃತಪಟ್ಟ ಘಟನೆ ಪಂಜಾಬ್ ನ ಅಮೃತಸರ-ಅಟ್ಟಾರಿ ರಸ್ತೆಯಲ್ಲಿರುವ ಹೆಡ್ ಕ್ವಾರ್ಟಸ್ ನಲ್ಲಿ ನಡೆದಿದೆ.
144ನೇ ಬೆಟಾಲಿಯನ್ ನ ಬಿ ಕಾಯ್, ಕಾನ್ ಸ್ಟೇಬಲ್ ಆಗಿದ್ದ ಸೆಟ್ಟಪ್ಪ ಎಸ್ ಕೆ, ಸಹೋದ್ಯೋಗಿಗಳು ಹಾಗೂ ಒಆರ್ ಎಸ್ ಬ್ಯಾರಕ್ ನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ಒಟ್ಟು ಐವರು ಯೋಧರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ 6 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅಮೃತಸರ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಬಿ ಎಸ್ ಎಫ್ ತಿಳಿಸಿದೆ.
ಉಕ್ರೇನ್-ರಷ್ಯಾ ಮುಂದುವರೆದ ಯುದ್ಧ; ಯಾವ ಸೇನೆಗೆ ಎಷ್ಟು ನಷ್ಟ? ಸಂಪೂರ್ಣ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ