ಪ್ರಗತಿವಾಹಿನಿ ಸುದ್ದಿ; ರಾಮನಗರ: ಪೊಲೀಸರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜನರನ್ನು ರಕ್ಷಿಸಲು ಇದ್ದೀರೋ ಅಥವಾ ಜನರಿಗೆ ತೊಂದರೆ ಕೊಡಲು ಇದ್ದೀರೋ? ಎಂದು ಪ್ರಶ್ನಿಸಿದ್ದಾರೆ.
ಹೆಲ್ಮೆಟ್ ಹಾಕದವರಿಗೆ ಭಾರಿ ದಂಡ ವಿಧಿಸುತ್ತಿದ್ದ ಸಂಚಾರಿ ಪೊಲೀಸರನ್ನು ತಡೆದು ಕಿಡಿಕಾರಿದ ಕುಮಾರಸ್ವಾಮಿ, ನಿನ್ನೆ ಮಧ್ಯಾಹ್ನ ದುಡ್ದು ಹೊಡೆದುಕೊಂಡು ಹೋದರು…ಅವರನ್ನು ನಿಮ್ಮ ಕೈಯಲ್ಲಿ ಹಿಡಿಯಲಾಗಲಿಲ್ಲ. ಈಗ ಗರ್ಭಿಣಿಯರನ್ನು ರಸ್ತೆಯಲ್ಲಿ ನಿಲ್ಲಿಸಿ ದಂಡ ಹಾಕುತ್ತಿದ್ದೀರಾ? ಮರ್ಯಾದೆ ಇಲ್ಲವೇ? ಎಂದು ಗುಡುಗಿದ್ದಾರೆ.
ನೀವೆಲ್ಲ ಜನರ ರಕ್ಷಣೆಗೆ ಇದ್ದಿರೋ ಅಥವಾ ತೊಂದರೆ ಕೊಡಲು ಇದ್ದೀರೋ? ದಂಡ ಕಟ್ಟಲು 500, 1000 ರೂಪಾಯಿ ಹಾಕುತ್ತಿದ್ದೀರಾ… ಯಾರಪ್ಪನ ಮನೆ ದುಡ್ದು? ಹೆರಿಗೆಗೆ ಹೋಗುವ ಹೆಣ್ಣುಮಕ್ಕಳನ್ನು ರಸ್ತೆಯಲ್ಲಿ ಅಡ್ಡ ಹಾಕುತ್ತಿದ್ದೀರಾ…ಮಾನ ಮರ್ಯಾದೆ ಇಲ್ವ? ಸರ್ಕಾರ ಸಂಬಳ ಕೊಡಲ್ವಾ? ಎಂದು ಪೊಲೀಸರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಹರ್ಷ ಹತ್ಯೆ ಪ್ರಕರಣ; 10 ಆರೋಪಿಗಳ ವಿರುದ್ಧ UAPA ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ