Kannada NewsKarnataka NewsLatest

ಆರ್.ಸಿ.ಯು 9 ನೇ ಘಟಿಕೋತ್ಸವ ಮಾ.9ಕ್ಕೆ

ಮೂವರಿಗೆ ಗೌರವ ಡಾಕ್ಟರೇಟ್, ೮೬ ಪಿ.ಎಚ್.ಡಿ ಪದವಿ ಹಾಗೂ ೯ ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಪ್ರದಾನ : ಕುಲಪತಿ ಪೋ. ಎಂ.ರಾಮಚಂದ್ರ ಗೌಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೯ ನೇ ವಾರ್ಷಿಕ ಘಟಿಕೋತ್ಸವವನ್ನು ಬುಧವಾರ(ಮಾರ್ಚ್ ೯) ಮುಂಜಾನೆ ೧೧ ಗಂಟೆಗೆ ಬೆಳಗಾವಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮೂವರಿಗೆ ಗೌರವ ಡಾಕ್ಟರೆಟ್; ೮೬ ಪಿ.ಎಚ್.ಡಿ ಪದವಿ ಹಾಗೂ ಒಂಬತ್ತು ವಿದ್ಯಾರ್ಥಿಗಳಿಗೆ ಸುವರ್ಣ ಪದಕ ಪ್ರದಾನ ಮಾಡಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಎಂ. ರಾಮಚಂದ್ರ ಗೌಡ ಅವರು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೯ ನೇ ಘಟಿಕೋತ್ಸವದ ಕುರಿತು ಬೆಳಗಾವಿ ವಾರ್ತಾ ಭವನದಲ್ಲಿ ಸೋಮವಾರ (ಮಾರ್ಚ್ ೭) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿ?ಯ ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೯ ನೇ ಘಟಿಕೋತ್ಸವದಲ್ಲಿ ಗೌರವಾನ್ವಿತ ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಮತ್ತು ಸಮಕುಲಾಧಿಪತಿಗಳಾದ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರು ಉಪಸ್ಥಿತರಿರುವರು ಹಾಗೂ ನವ ದೆಹಲಿಯ ತಳಿ ಮತ್ತು ಜೈವಿಕ ತಂತ್ರಜ್ಞಾನದ ಅಂತರಾಷ್ಟ್ರೀಯ ಅಧ್ಯಯನ ಕೇಂದ್ರದ ನಿರ್ದೇಕರಾದ ಪ್ರೋ. ವಿ.ಎಸ್.ಚೌವ್ಹಾಣ್ ಅವರು ಘಟಿಕೋತ್ಸವದ ಭಾ?ಣ ಮಾಡಲಿದ್ದಾರೆ ಎಂದು ಹೇಳಿದರು.

ಮೂವರಿಗೆ ಡಾಕ್ಟರೇಟ್ ಗೌರವ :
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮೂವರು ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ, ಪ್ರಧಾನ ಮಾಡಲಾಗುವುದು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಂಡಿತ್ ರಾಜೀವ ತಾರಾನಾಥ ಇವರಿಗೆ ಭಾರತೀಯ ಸಂಗೀತ ಕ್ಷೇತ್ರದಲ್ಲಿ “ಡಾಕ್ಟರ್ ಆಪ್ ಲೆಟರ್ಸ್”, ಪದ್ಮಶ್ರೀ ಪುರಸ್ಕೃತರಾದ ಡಾ. ಹೆಚ್.ಸುದರ್ಶನ ಬಲ್ಲಾಳ ಇವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ” ಡಾಕ್ಟರ್ ಆಫ್ ಸೈನ್ಸ್ “, ವಾದಿರಾಜ ಬಿ.ದೇಶಪಾಂಡೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ” ಡಾಕ್ಟರ್ ಆಫ್ ಲೆಟರ್ಸ್” ಗೌರವ ಡಾಕ್ಟರೇಟ್ ಪದಿವಿಯನ್ನು ಪ್ರದಾನ ಮಾಡಲಾಗುವುದು.

ಹತ್ತು ಸುವರ್ಣ ಪದಕ , ೮೬ ಪಿ.ಎಚ್.ಡಿ ಪದವಿ ಪ್ರದಾನ:
ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೌಮ್ಯ ಕುಂಬಾರ ಅವರಿಗೆ ಎರಡು ಸುವರ್ಣ ಪದಕ; ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶ್ವೇತಾ ಬಸವರಾಜ ಗುಲನ್ನವರ ಒಂದು ಸುವರ್ಣ ಪದಕ; ಬಾಗಲಕೋಟೆಯ ಬಿ.ವಿ.ವಿ ಮ್ಯಾನೆಜ್‌ಮೆಂಟ್ ಸ್ಟಡಿಸ್ ವಿದ್ಯಾರ್ಥಿನಿ ಸಪ್ನಾ ಕಜೂರ ಒಂದು ಸುವರ್ಣ ಪದಕ ಹಾಗೂ ನಿಪ್ಪಾಣಿಯ ಕೆ.ಎಲ್.ಇ.ಎಸ್ ಜಿ.ಐ ಬಾಗೇವಾಡಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್ ನ ವಿದ್ಯಾರ್ಥಿನಿ ಜ್ಯೋತಿ ಅರುಣ ಚಾವನ ಅವರಿಗೆ ಒಂದು ಸುವರ್ಣ ಪದಕ ಹೀಗೆ ಒಟ್ಟು ಸ್ನಾತಕೋತ್ತರ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಐದು ಸುವರ್ಣ ಪದಕಗಳನ್ನು ಪಡೆದಿದ್ದಾರೆ.
ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ಕಾಲೇಜ್ ಆಫ್ ಕಾಮರ್ಸ್ ನ ವಿದ್ಯಾರ್ಥಿನಿ ಅಕ್ಷತಾ ಬಾಲಕೃ? ಭಟ್ ಒಂದು ಸುವರ್ಣ ಪದಕ ಹಾಗೂ ಜಮಖಂಡಿಯ ತುಂಗಳ ಸ್ಕೂಲ್ ಆಫ್ ಬೆಸಿಕ್ ಆಂಡ್ ಅಪ್ಲೈಡ್ ಸೈನ್ಸ್ ವಿದ್ಯಾರ್ಥಿನಿ ಸಾವಿತ್ರಿ ಹಿರೇಮಠ ಒಂದು ಸುವರ್ಣ ಪದಕ ಒಟ್ಟು ಸ್ನಾತಕ ವಿಭಾಗದಲ್ಲಿ ಎರಡು ಸುವರ್ಣ ಪದಕಗಳನ್ನು ಪಡೆದಿದ್ದಾರೆ.
ಎಸ್.ಸಿ.ಪಿ ಕಲಾ ಮತ್ತು ಡಿ.ಡಿ.ಎಸ್ ಕಾಮರ್ಸ್ ಕಾಲೇಜ್ ನ ವಿದ್ಯಾರ್ಥಿನಿ ಗಾಯತ್ರಿ ಶಿವಲಿಂಗಪ್ಪ ಬಾಗೇವಾಡಿ ಒಂದು ಸುವರ್ಣ ಪದಕ, ಗೋಕಾಕನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿನಿ ಸವಿತಾ ಪರಕನಟ್ಟಿ ಒಂದು ಸುವರ್ಣ ಪದಕ ಹಾಗೂ ಸವದತ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿ ಸುರೇಶ ಮಲಕಪ್ಪ ಬಿದರಿ ಒಂದು ಸುವರ್ಣ ಪದಕ, ಒಟ್ಟು ಮೂರು ಸ್ನಾತಕ ಕಲಾ ವಿಭಾಗದ ವಿ?ಯವಾರು ಸುವರ್ಣ ಪದಕ ಪಡೆದಿದ್ದಾರೆ.
ಒಟ್ಟು ಹತ್ತು ಸುವರ್ಣ ಪದಕಗಳನ್ನು ಒಂಬತ್ತು ಜನ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಕಲಾ, ವಾಣಿಜ್ಯ, ಶಿಕ್ಷಣ ಮತ್ತು ವಿಜ್ಞಾನ ವಿಷಯದಲ್ಲಿ ಉನ್ನತ ಪದವಿ ಪಡೆದ ೮೬ ಜನ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಗುವುದು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಇತ್ತೀಚೆಗೆ ನ್ಯಾಕ್ ಮನ್ನಣೆಯಲ್ಲಿ ಉನ್ನತ ಶ್ರೇಣಿಯನ್ನ ಪಡೆದುಕೊಂಡಿದೆ. ಇ-ಆಡಳಿತ ವ್ಯವಸ್ಥೆ ಜಾರಿಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಹಾಗೂ ಪ್ರಸಕ್ತ ಶೈಕ್ಷಣಿಕ ವ?ದಿಂದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ಅನು?ನಗೊಳಿಸಲಾಗಿದೆ ಎಂದರು.
ವಿಶ್ವವಿದ್ಯಾಲಯಕ್ಕೆ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ೪೦೮ ಮಹಾವಿದ್ಯಾಲಯಗಳು ವಿಶ್ವವಿದ್ಯಾಲಯದ ಅಧೀನದಲ್ಲಿ ಸಂಯೋಜನೆಗೊಂಡಿವೆ. ಸುಮಾರು ೧ ಲಕ್ಷ ೫೦ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿಜಯಪುರ ಮತ್ತು ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಷ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯ ಹೊಂದಿದ್ದು, ೪೨ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
೨೧ ವಿ?ಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ನಲ್ಲಿ ೧೮೩೮ ವಿದ್ಯಾರ್ಥಿಗಳು ಉನ್ನತ ಅಧ್ಯಯನ ನಡೆಸುತ್ತಿದ್ದು, ೪ ವಿ?ಯಗಳಲ್ಲಿ ಪಿ.ಜಿ. ಡಿಪ್ಲೋಮಾ ಕೋರ್ಸ್ ಗಳು, ೪೩೫ ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿ?ಯಗಳಲ್ಲಿ ಪಿ.ಎಚ್.ಡಿ. ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಎಂ. ರಾಮಚಂದ್ರ ಗೌಡ ಅವರು ತಿಳಿಸಿದರು.
ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ವೀರನಗೌಡ ಬಿ. ಪಾಟೀಲ ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೋ. ಡಿ.ಎನ್.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ‌ ವೇಳಾಪಟ್ಟಿ ; ಯಾವ ದಿನ ಯಾವ ಪರೀಕ್ಷೆ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button