Kannada NewsLatestPolitics

ಮಧುಮೇಹ ಹೊಂದಿದ 5 ಜನರಲ್ಲಿ 3 ಜನ ಕಿಡ್ನಿ ತೊಂದರೆಗೆ ಒಳಗಾಗುತ್ತಿದ್ದಾರೆ – ಡಾ. ಎಂ ವಿ ಜಾಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಮಧುಮೇಹದಿಂದ ನೀವು ಬಳಲುತ್ತಿದ್ದರೆ ನಿಧಾನವಾಗಿ ಕಿಡ್ನಿ ಸಮಸ್ಯೆಗೆ ಒಳಗಾಗಲಿದ್ದೀರಿ, ಒಂದು ವೇಳೆ ಮಧುಮೇಹ ರೋಗಿಯಲ್ಲದಿದ್ದರೂ ಕೂಡ ಕಿಡ್ನಿ ಸಮಸ್ಯೆ ಉಂಟಾಗಬಹುದು. ಆದರೆ ಕಿಡ್ನಿ ರಕ್ಷಿಸಿಕೊಳ್ಳುವ, ಆರೋಗ್ಯಯುತ ಕಿಡ್ನಿ ಹೊಂದಲು ನಿಮ್ಮಲ್ಲಿ ಅದರ ಕುರಿತು ಅರಿವು ಅತ್ಯವಶ್ಯವಾಗಿ ಇರಬೇಕು. ಮಧುಮೇಹ ಹೊಂದಿದ ೫ ಜನರಲ್ಲಿ ೩ ಜನ ಕಿಡ್ನಿ ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಕಿಡ್ನಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕೆಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗವು ಏರ್ಪಡಿಸಲಾಗಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದಲ್ಲಿನ ಹರಳು ಹಾಗೂ ಮೂತ್ರನಾಳದ ಸೋಂಕಿನಿಂದ ಕಿಡ್ನಿ ಹಾಳಾಗುತ್ತವೆ. ೧.೨೫ ಲಕ್ಷ ರೋಗಿಗಳಿಗೆ ಕಿಡ್ನಿ ಕಸಿ ಮಾಡಬೇಕಾಗಿದ್ದರೂ ಕೇವಲ ೪ ಸಾವಿರ ಜನರಿಗೆ ಮಾತ್ರ ಕಿಡ್ನಿ ಲಭ್ಯವಾಗುತ್ತಿವೆ. ಕಿಡ್ನಿ ಹಾಳಾದರೆ ಅದಕ್ಕೆ ನಿರಂತರ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ಆದ್ದರಿಂದ ಕಿಡ್ನಿ ಹಾಳಾಗದಂತೆ ಎಚ್ಚರಿಕೆವಹಿಸಬೇಕು ಎಂದ ಅವರು, ೨೦೦೬ರಲ್ಲಿ ಡಯಾಲಿಸಿಸ್‌ಗೆ ೫ ಸಾವಿರ ರೂ.ಗಳ ಖಾರ್ಚಾಗುತ್ತಿತ್ತು. ಆದರೆ ಕೆಎಲ್‌ಇ ಆಸ್ಪತ್ರೆಯಲ್ಲಿ ಕೇವಲ ೨ ಸಾವಿರ ರೂ.ಗಳಿಗೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ದೇಶದಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ೭೫ ಡಾಯಾಲಿಸಿಸ ಯಂತ್ರಗಳುಳ್ಳ ಹಾಗೂ ಕಿಡ್ನಿ ಸಂಬAಧಿತ ಸಕಲ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿದರು.

ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ(ಖಾನಪೇಟ) ಅವರು ಮಾತನಾಡಿ, ನ್ಯಾಲಿಗೆ ರುಚಿ ನೋಡಿದರೆ ಕಿಡ್ನಿ ಹಾಳಾಗುವ ಸಮಯ ಅಧಿಕ. ಬಿಪಿ, ಕೊಲೆಸ್ಟರಾಲ್, ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡಿ, ವೈದ್ಯರು ಸಲಹೆ ಇಲ್ಲದೆ ಅನಾವಶ್ಯಕ ಔಷಧಿ ಸೇವನೆ ಬೇಡ. ಔಷಧಿಗಳ ಕುರಿತು ಹಾಗೂ ಕಿಡ್ನಿ ಹಾಳಾಗುವದನ್ನು ತಡೆಯಬಹುದು ಅಥವಾ ಮುಂದೂಡಬಹುದು. ನಿರ್ಲಕ್ಷಿಸಿದರೆ ಸಾವು ಖಚಿತ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುತ್ತ ಸುಮಾರು ೩೦ ವರ್ಷಗಳ ಕಾಲ ಡಯಾಲಿಸಿಸ್ ಮೇಲೆ ಇದ್ದಾರೆ. ಡಯಾಲಿಸಿಸ್ ಒಳ್ಳೆಯ ಚಿಕಿತ್ಸೆ ಎಂದು ವಿವರಿಸಿದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚರ‍್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ ಅವರು ಮಾತನಾಡಿದರು. ಡಾ. ರವಿ ಸರ‍್ವಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ. ರಿತೇಶ ವೆರ್ಣೆಕರ, ಡಾ. ಬಸವರಾಜ ಬಿಜ್ಜರಗಿ, ಡಾ. ಎಸ್ ಐ ನೀಲಿ, ಶಕುಂತಲಾ ಕೋರೆ, ಷರಿಫಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಶಿಲ್ಪಾ ಪೂಜಾರ ನಿರೂಪಿಸಿ ವಂದಿಸಿದರು.

NPS ರದ್ದು: ಸುಳಿವು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ಸರಕಾರಿ ನೌಕರರಿಗೆ ಖುಷಿ ಸುದ್ದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button