Kannada NewsLatest

ಭವಿಷ್ಯದ ಉಳಿವಿಗಾಗಿ ಲಿಂಗ ಸಮಾನತೆ ಅವಶ್ಯ -ಪಿ ವಿ ಸ್ನೇಹಾ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸ್ತ್ರೀ-ಪುರುಷ ಎನ್ನದೇ ಸಮಾಜವು ಲಿಂಗತಾರತಮ್ಯ ಮಾಡದೇ ಸಮಾನವಾಗಿ ಕಂಡಾಗ ಮಾತ್ರ ಹೆಣ್ಣು ಮತ್ತು ಗಂಡು ಎಂಬ ಬೇಧ ಭಾವ ತೊಲಗಲು ಸಾಧ್ಯ. ಮಹಿಳೆ ಇಂದು ಆರ್ಥಿಕವಾಗಿ ಪ್ರಬಲವಾಗಿದ್ದಿರಬಹುದು ಆದರೆ ಸ್ತ್ರೀ ಭಾವನೆಗಳನ್ನು ಇವನೊಬ್ಬರು ಹೊಂದಲು ಸಾಧ್ಯವಿಲ್ಲ. ಸ್ತ್ರೀ ಮಾತ್ರ ತಾಯಿಯಾಗಬಲ್ಲಳು. ಅವಳಲ್ಲಿ ಅಗಾಧವಾದ ಶಕ್ತಿ ಇದೆ ಅದನ್ನು ಎನ್ನೊಬ್ಬರ ಏಳ್ಗೆಗೆ ಬಳಸಿಕೊಳ್ಳಬೇಕು. ಅಲ್ಲದೇ ಭವಿಷ್ಯದ ಉಳಿವಿಗಾಗಿ ಲಿಂಗ ಸಮಾನತೆ ಅವಶ್ಯವಾಗಿ ಬೇಕೆ ಬೇಕು ಎಂದು ಡಿಸಿಪಿ ಪಿ ವಿ ಸ್ನೇಹಾ ಅವರಿಂದಿಲ್ಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗವು ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಅಭಿವೃದ್ದಿಯಾಗಬೇಕಾದರೆ ಪುರುಷರು ಎಷ್ಟು ಅವಷ್ಯವೋ ಅಷ್ಟೇ ಸ್ತ್ರೀಯರು ಕೂಡ ಮುಖ್ಯ. ಸ್ತ್ರೀ ಇಲ್ಲದ ಸಮಾಜ ಉಹಿಸಿಕೊಳ್ಳುವದು ಕಷ್ಟ. ತಂತ್ರಜ್ಞಾನ ಬೆಳವಣಿಗೆಯಾದಂತೆ ಮಹಿಳೆ ಇಚಿದು ಅತ್ಯುನ್ನತವಾದ ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾಳೆ. ಆದರೆ ಹಕ್ಕುಗಳನ್ನು ಪಡೆಯಲು ಹೋರಾಡುವ ಮಹಿಳೆ ಮನೆಯಲ್ಲಿನ ಸಂಸ್ಸೃತಿಯನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಸ್ತ್ರೀ ಹೊರತುಪಡಿಸಿ ಮಾತೃತ್ವ ಮತ್ತು ತಾಯಿ ಪ್ರೀತಿಯನ್ನು ಬೇರೆಯವರಿಗೆ ಕೊಡಲು ಅಸಾಧ್ಯ ಎಂದು ಭಾವನೆಗಳನ್ನು ವ್ಯಕ್ತಪಡಿಸಿದರು.

ಇಂದಿನ ಆಧುನಿಕ ಜೀವನದಲ್ಲಿ ನೋಡಿದ್ದೆಲ್ಲ ನಿಜವಲ್ಲ. ಜ್ಞಾನ, ಶಕ್ತಿ, ಯುಕ್ತಿ, ತತ್ವಜ್ಞಾನದದಲ್ಲಿ ಬದುಕು ಕೂಡಿಕೊಂಡಿರಬೇಕು. ಓದು, ಕೆಲಸ, ಫಾರೆನ ಎಂಬುದರಲ್ಲಿಯೇ ನಮ್ಮ ಜೀವನ ಸವೆದುಹೋಗುತ್ತಿದೆ. ಬೇರೆಯವರು ಹೇಗಾದರೂ ಇರಲಿ, ನಾನು ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎಂಬ ಭಾವನೆ ಇದೆ. ಅದು ಬದಲಾಗಬೇಕು. ಇನ್ನೊಬ್ಬರ ಕಷ್ಟಕ್ಕೆ ಸಹಾಯಕ್ಕಾಗಿ ನಿಲ್ಲಿ. ಸೌಜನ್ಯತೆ ಇರಲಿ. ಶಿಕ್ಷಣದಿಂದ ಮಹಿಳಾ ಅಂತಸ್ತು ಹೆಚ್ಚಿದೆ ಆದರೆ, ವರದಕ್ಷಿಣೆ ಪಿಡುಗು ಹೆಚ್ಚಾಗಿ ಮಾನವೀಯತೆ ಮರೆಮಾಚಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಪ್ರತಿಯೊಂದು ಮನೆಯು ಮಹಿಳೆಯ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದ ಮೊದಲು ಮಹಿಳೆ ಆರೋಗ್ಯಯುತವಾಗಿರಬೇಕು. ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಇಂದಿನ ಸಮಾಜದಲ್ಲಿ ಮಹಿಳೆಯರೂ ಕೂಡ ಪುರುಷರಷ್ಷ್ಟೇ ಸಮಾನರಾಗಿದ್ದಾರೆ. ಸಾಮಾಜಿಕ, ಆರ್ಥಿಕವಾಗಿಯೂ ಪ್ರಬಲವಾಗಿದ್ದಾರೆ. ಆದರೆ ಆಧುನಿಕತೆಯಲ್ಲಿ ತಮ್ಮ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಮನೆಯ ಸಂಪೂರ್ಣ ಜವಾಬ್ದಾರಿ ಇರುವ ಮಹಿಳೆ ಮೊದಲು ಆರೋಗ್ಯಯುತವಾಗಿರಬೇಕು ಎಂದು ಸಲಹೆ ನೀಡಿದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡಿದರು. ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞವೈದ್ಯರಾದ ಡಾ. ಎಂ ಬಿ ಬೆಲ್ಲದ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಡಾ. ಯಶಿತಾ ಪೂಜಾರ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಬಸವರಾಜ ಬಿಜ್ಜರಗಿ, ಡಾ. ಆರಿಫ್ ಮಾಲ್ದಾರ, ಡಾ. ಎಂ ಸಿ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಫರ್ಜಾನಾ ವಂದಿಸಿದರು.
ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಎರಡು ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button