Latest

ಹಿಜಾಬ್ ತೀರ್ಪು; 4 ಪ್ರಶ್ನೆಗಳಿಗೆ 4 ಉತ್ತರ ; ಹೈಕೋರ್ಟ್ ಪರಿಗಣಿಸಿದ ಮಹತ್ವದ ಅಂಶಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ಪ್ರಕಟಿಸಿದ್ದು, ಪ್ರಮುಖವಾಗಿ ನಾಲ್ಕು ಅಂಶಗಳನ್ನು ಪರಿಗಣಿಸಿದೆ.

ಹೈಕೋರ್ಟ್ ತ್ರಿಸದಸ್ಯ ಪೀಠ ಹಿಜಾಬ್ ಕುರಿತ ಅರ್ಜಿ ವಿಚಾರಣೆಯಲ್ಲಿ ಪ್ರಮುಖವಾಗಿ ನಾಲ್ಕು ಪ್ರಶ್ನೆಗಳನ್ನು ಪರಿಗಣಿಸಿದ್ದು, ಅದಕ್ಕೆ ಉತ್ತರವಾಗಿ ತೀರ್ಪು ಪ್ರಕಟವಾಗಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ತಿಳಿಸಿದ್ದಾರೆ.

1. ಹಿಜಾಬ್ ಅತ್ಯಗತ್ಯ ಧಾಮಿಕ ಆಚರಣೆಯೆ?
ಉತ್ತರ: ಹಿಜಾಬ್ ಇಸ್ಲಾಂ ನ ಅತ್ಯಗತ್ಯ ಆಚರಣೆಯಲ್ಲ
2. ಸರ್ಕಾರದ ಸಮವಸ್ತ್ರ ಅಭಿವ್ಯಕ್ತಿ ಸ್ವತಂತ್ರ್ಯಕ್ಕೆ ಧಕ್ಕೆಯಾಗಲಿದೆಯೇ?
ಉತ್ತರ: ಸಮವಸ್ತ್ರ ನಿಗದಿ ಸೂಕ್ತವಾದ ನಿರ್ಬಂಧನೆ ಹೊರತು ಅಭಿವ್ಯಕ್ತಿಗೆ ಧಕ್ಕೆಯಲ್ಲ
3. ಸರ್ಕಾರದ ಆದೇಶ ಕಾನೂನುಬಾಹಿರವೆ?
ಉತ್ತರ: ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ
4. ಉಡುಪಿ ಕಾಲೇಜಿನ ಮೇಲೆ ಕ್ರಮ ಅಗತ್ಯವಿದೆಯೇ?
ಉತ್ತರ: ಸಮವಸ್ತ್ರದ ಅಧಿಕಾರ ಶಾಲೆಗಳಿಗೆ ಇದೆ
ಈ ನಾಲ್ಕು ಪ್ರಶ್ನೆಗಳಿಗೆ ಉತ್ತರದ ಮೂಲಕವಾಗಿ ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಪ್ರಕಟಿಸಿದೆ ಎಂದು ಹೇಳಿದ್ದಾರೆ.

ಸಂವಿಧಾನ ಧರ್ಮಕ್ಕಿಂತ ದೊಡ್ದದು ಎಂದ ಬಿಎಸ್ ವೈ; ಹೈಕೋರ್ಟ್ ತೀರ್ಪು ವಿಶ್ವಕ್ಕೆ ಮಾದರಿ ಎಂದ ಈಶ್ವರಪ್ಪ

ಹಿಜಾಬ್ ವಿವಾದ; ಎಲ್ಲಾ ರಿಟ್ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್; ಮಹತ್ವದ ತೀರ್ಪು ಪ್ರಕಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button