Latest

ಶೀಘ್ರ ಸಾಕಾರಗೊಳ್ಳಲಿದೆಯೇ ನಿತಿನ್ ಗಡ್ಕರಿಯ ಈ ಕನಸು? ಇದಾದರೆ ದೇಶವೇ ಸುಭಿಕ್ಷ!

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶದ ದೊಡ್ಡ ಪ್ರಮಾಣದ ಸಂಪತ್ತು ಇಂಧನಕ್ಕೆ ವ್ಯಯವಾಗುತ್ತಿದೆ. ಕೋಟಿ ಕೋಟಿ ವಾಹನಗಳು ಪೆಟ್ರೋಲ್, ಡಿಸೆಲ್ ಸುಡುತ್ತ ರಸ್ತೆಯಲ್ಲಿ ಓಡುವುದನ್ನು ನೋಡಿದಾಗ ದುಡ್ಡನ್ನೇ ಸುಟ್ಟ ಅನುಭವವಾಗುತ್ತದೆ. ಆದರೆ ಪರ್ಯಾಯ ಮಾರ್ಗವಿಲ್ಲದೆ ಅನಿವಾರ್ಯವಾಗಿ ವಿದೇಶಕ್ಕೆ ಹಣ ಕೊಟ್ಟು ಇಂಧನ ಖರೀದಿಸುತ್ತಿದ್ದೇವೆ.

ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು ಬಂದರೂ ಅದನ್ನು ಚಾರ್ಜ್ ಮಾಡುವ ಸಮಸ್ಯೆಯಿಂದಾಗಿ ಯಶಸ್ಸು ಕಾಣುತ್ತಿಲ್ಲ. ಚಾರ್ಜ್ ಮಾಡುವುದಕ್ಕೆ ಸಮಯ ನೀಡುವುದು ಒಂದಿಷ್ಟು ಜನರ ಸಮಸ್ಯೆಯಾದರೆ, ಚಾರ್ಜ್ ಮುಗಿದು ಎಲ್ಲಿ ರಸ್ತೆ ಮಧ್ಯೆ ನಿಲ್ಲಬೇಕಾಗುವುದೋ ಎನ್ನುವುದು ಮತ್ತಷ್ಟು ಜನರ ಸಮಸ್ಯೆ.

ಇದೀಗ ಮತ್ತೊಂದು ಹೊಸ ಚಿಂತನೆ ಹರಿದಾಡುತ್ತಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇದೀಗ ಇಂತಹ ಚಿಂತನೆಯನ್ನು ಹರಿಬಿಟ್ಟಿದ್ದಾರೆ. ವಾಹನ ಚಲಿಸುತ್ತಿರುವಾಗ ರಸ್ತೆಯೇ ವಾಹನವನ್ನು ಚಾರ್ಜ್ ಮಾಡುತ್ತದೆ. ಚಾರ್ಜಿಂಗ್ ಉಪಕರಣಗಳನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದರಿಂದಾಗಿ ಚಾರ್ಜ್ ಆಗುತ್ತಲೇ ವಾಹನ ಓಡುತ್ತದೆ. ಇದಾದರೆ ಇಂಧನ ಸಮಸ್ಯೆಗೆ ಒಂದಿಷ್ಟು ಮುಕ್ತಿ ಸಿಗಬಹುದು. ದೇಶದ ಆರ್ಥಿಕತೆ ಗಟ್ಟಿಯಾಗಬಹುದು. ಇದಕ್ಕಾಗಿ ವಾಹನ ಸವಾರರು ಸ್ವಲ್ಪ ಮಟ್ಟಿಗೆ ಹೆಚ್ಚಿನ ಶುಲ್ಕವನ್ನು ಭರಿಸಬೇಕಾಗಬಹುದು.

ಇದೇನು ತೀರಾ ಹೊಸ ಕಲ್ಪನೆಯಲ್ಲ. ಸ್ವೀಡನ್ ದೇಶದಲ್ಲಿ ಇಂತಹ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಪ್ರಾಯೋಗಿಕವಾಗಿ ದೆಹಲಿ – ಜೈಪುರ ರಸ್ತೆಯನ್ನು ಚಾರ್ಜಿಂಗ್ ರಸ್ತೆಯನ್ನಾಗಿಸುವ ಇಂಗಿತವನ್ನು ಗಡ್ಕರಿ ಹೊರಹಾಕಿದ್ದಾರೆ. ಇದಾದರೆ, ಯಶಸ್ವಿಯಾದರೆ ದೇಶದ ಹಲವೆಡೆ ಇಂತಹ ರಸ್ತೆಗಳ ಬರಲಿವೆ. ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಇಂತಹ ಚಾರ್ಜಿಂಗ್ ರಸ್ತೆಗಳನ್ನು ನೋಡುವಂತಾಗಬಹುದು.

ಆದಷ್ಟು ಬೇಗ ಇಂತಹ ವ್ಯವಸ್ಥೆ ಜಾರಿಗೆ ಬರಲಿ ಎಂದು ಆಶಿಸೋಣ.

9 ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಪಿಡಿಓ ಪತ್ನಿ; ಪತಿ ಬಂಧನ

https://pragati.taskdun.com/world-news/ukrain-sailor-sinked-russian-yatch/

https://pragati.taskdun.com/latest/justice-pushpa-genadiwalaresignbomby-highcourt/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button