ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ –
ಜೇಮ್ಸ್ ಬಾಂಡ್ ಸರಣಿ ಸಿನೇಮಾಗಳಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಏಕ್ ಥಾ ಟೈಗರ್, ಬೇಬಿ ಮೊದಲಾದ ಚಲನಚಿತ್ರಗಳು ಪತ್ತೆದಾರಿ ತನಿಖಾ ಸಂಸ್ಥೆಗಳು, ಪತ್ತೆದಾರರ ಜೀವನ ಶೈಲಿ, ಕಾರ್ಯಾಚರಣೆಯನ್ನು ಸಾಧ್ಯಂತವಾಗಿ ತೆರೆದಿಟ್ಟಿದೆ. ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಒಮ್ಮೆಯಾದರೂ ಪತ್ತೆದಾರನಾಗಬೇಕೆಂಬ ಕನಸು ಕಾಣದೆ ಇರಲಾರ.
ಭಾರತದಲ್ಲಿ ದೇಶದ ಆಂತರಿಕವಾಗಿ ಮತ್ತು ವಿದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಅನೇಕ ಪತ್ತೆದಾರಿ ತನಿಖಾ ಸಂಸ್ಥೆಗಳಿವೆ. ಬೇರೆ ಬೇರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿ, ಕಾರ್ಯ ವಿಧಾನ ವಿಭಿನ್ನವಾಗಿರುತ್ತವೆ.
ಭಾರತದಲ್ಲಿ ಸಿಬಿಐ (ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್) ಐಬಿ (ಇಂಟಲಿಜೆನ್ಸ್ ಬ್ಯೂರೊ), ರಾ (ರೀಸರ್ಚ್ ಎಂಡ್ ಅನಾಲಿಸಿಸ್ ವಿಂಗ್), ಎನ್‌ಐಎ (ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ) ಪ್ರಮುಖವಾಗಿವೆ.
ಈ ಪೈಕಿ ರಾ ವಿದೇಶಗಳಲ್ಲಿ ಗೂಡಾಚಾರಿಕೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಐಬಿ ದೇಶದ ಒಳಗೆ ಮತ್ತು ವಿದೇಶಗಳೆರಡರಲ್ಲೂ ಕಾರ್ಯಚರಣೆ ನಡೆಸುತ್ತದೆ. ಸಿಬಿಐ ದೇಶದ ಎಲ್ಲ ಆಂತರಿಕ ಅಪರಾಧಿಕ ಚಟುವಟಿಕೆಗಳ ತನಿಖೆ ಕೈಗೊಳ್ಳುವ ಅಧಿಕಾರ ಹೊಂದಿದ್ದರೆ ಎನ್‌ಐಎ ಉಗ್ರಗಾಮಿ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.
ಸಿಬಿಐ
ನವದೆಹಲಿಯಲ್ಲಿ ಮುಖ್ಯ ಕಚೇರಿ ಹೊಂದಿದೆ.
ವಾರ್ಷಿಕ ಬಜೆಟ್: ೯೧೧.೮೭ ಕೋಟಿ ರೂ.
ಸಂಸ್ಥಾಪಕರು: ಭಾರತ ಸರ್ಕಾರ
ಕಾರ್ಯಾಚರಣೆ ವ್ಯಾಪ್ತಿ: ಭಾರತ ದೇಶದ ವ್ಯಾಪ್ತಿ.
ಒಟ್ಟು ಸಿಬ್ಬಂದಿ: ೭೨೭೪
ಹಾಲಿ ಇರುವ ಸಿಬ್ಬಂದಿ: ೬೩೯೧
ಖಾಲಿ ಹುದ್ದೆಗಳು: ೮೮೩
ವೇತನ: ೪೪,೯೦೦-೧,೪೨,೪೦೦ ರೂ.
ನೇಮಕಾತಿ ಹೇಗೆ : ಸಿಬಿಐ ಸಬ್ ಇನ್ಸ್ಪೆಕ್ಟರ್ ಹುದ್ದೆ ಸೇರಲು ಕನಿಷ್ಠ ಪದವಿಯಲ್ಲಿ ಉನ್ನತ ಅಂಕಗಳೊಂದಿಗೆ ಪಾಸಾಗಿರಬೇಕು. ಎಸ್‌ಎಸ್‌ಸಿ-ಸಿಜಿಎಲ್ ಉತ್ತೀರ್ಣರಾಗೇಕು. ಸಿಬಿಐ ನಿರ್ದೇಶಕ, ಎ ಗ್ರೇಡ್ ಹುದ್ದೆಗೆ ನೇಮಕಗೊಳ್ಳಲು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಪಿಎಸ್ ತರಬೇತಿ ಪಡೆದಿರಬೇಕು.
(ಮುಂದುವರಿಯಲಿದೆ)
ರಾಜ್ಯದ 18 ಅಧಿಕಾರಿಗಳ ಮನೆ ಮೇಲೆ ಎಸಿಬಿ ಏಕಕಾಲಕ್ಕೆ ದಾಳಿ; ಇಲ್ಲಿದೆ ಅಧಿಕಾರಿಗಳ ವಿವರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ